ADVERTISEMENT

ಲಕ್ಕುಂಡಿ | ಪ್ರಜ್ವಲ್‌ ಕುಟುಂಬಕ್ಕೆ ನಿವೇಶನ, ₹5 ಲಕ್ಷ ನೆರವು; ತಾಯಿಗೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 23:38 IST
Last Updated 26 ಜನವರಿ 2026, 23:38 IST
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಜ್ವಲ್ ರಿತ್ತಿ ಕುಟುಂಬವನ್ನು ಸಚಿವ ಎಚ್‌.ಕೆ. ಪಾಟೀಲ ಸನ್ಮಾನಿಸಿದರು
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಜ್ವಲ್ ರಿತ್ತಿ ಕುಟುಂಬವನ್ನು ಸಚಿವ ಎಚ್‌.ಕೆ. ಪಾಟೀಲ ಸನ್ಮಾನಿಸಿದರು   

ಗದಗ: ಮನೆಯ ತಳಪಾಯ ತೆಗೆಯುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಲಕ್ಕುಂಡಿ ಗ್ರಾಮದ ಬಾಲಕ ಪ್ರಜ್ವಲ್‌ ರಿತ್ತಿ, ತಾಯಿ ಕಸ್ತೂರವ್ವ ರಿತ್ತಿ, ಅಜ್ಜಿ ಗಿರಿಜಮ್ಮ ಅವರಿಗೆ ಸೋಮವಾರ ಜಿಲ್ಲಾಡಳಿತವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸನ್ಮಾನಿಸಿತು. 

‘ಲಕ್ಕುಂಡಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯ ನಿರ್ಣಯದಂತೆ ಅವರಿಗೆ 30X40 ಅಳತೆಯ ನಿವೇಶನ ಹಂಚಿಕೆಯ ಹಕ್ಕುಪತ್ರ, ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಯಡಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕರ ವಿವೇಚನಾ ಅನುದಾನದಲ್ಲಿ ₹5 ಲಕ್ಷ ಮಂಜೂರಾತಿ ನೀಡಿದ ಆದೇಶ ಪತ್ರ ನೀಡಲಾಗಿದೆ. ಪ್ರಜ್ವಲ್‌ ಅವರ ತಾಯಿ ಕಸ್ತೂರವ್ವ ಅವರಿಗೆ ನಗರದ ಎಂಜಿನಿಯರಿಂಗ್‌, ಮತ್ತು ಮೆಡಿಕಲ್‌ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಹೊರಗುತ್ತಿಗೆ ಆಧಾರದಡಿ ಅಡುಗೆ ಸಹಾಯಕಿ ಹುದ್ದೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT