ADVERTISEMENT

ಲಕ್ಷ್ಮೇಶ್ವರ | ಸಂಕ್ರಾಂತಿ: ವಿಷಮುಕ್ತ ಪುಣ್ಯಸ್ನಾನ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:29 IST
Last Updated 15 ಜನವರಿ 2026, 4:29 IST
ಲಕ್ಷ್ಮೇಶ್ವರದ ಅಗಸ್ತ್ಯತೀರ್ಥ ಕ್ಷೇತ್ರದಲ್ಲಿ ಬುಧವಾರ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಮ್ಮಿಕೊಳ್ಳಲಾಯಿತು 
ಲಕ್ಷ್ಮೇಶ್ವರದ ಅಗಸ್ತ್ಯತೀರ್ಥ ಕ್ಷೇತ್ರದಲ್ಲಿ ಬುಧವಾರ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಮ್ಮಿಕೊಳ್ಳಲಾಯಿತು    

ಲಕ್ಷ್ಮೇಶ್ವರ: ಇಲ್ಲಿನ ಪುರಾಣ ಪ್ರಸಿದ್ಧ ಅಗಸ್ತ್ಯತೀರ್ಥ ಕ್ಷೇತ್ರದಲ್ಲಿ ಸಂಕ್ರಾಂತಿ ಪುಣ್ಯಸ್ನಾನ ನಿಮಿತ್ತ ಬುಧವಾರ ಯುವ ಗೆಳೆಯರ ಬಳಗ, ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಹಾಗೂ ವಿವಿಧ ಸಂಘಟನೆ ವತಿಯಿಂದ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಮ್ಮಿಕೊಳ್ಳಲಾಯಿತು.

ಯುವ ಗೆಳೆಯರ ಬಳಗದ ಮಹೇಶ ಹೊಗೆಸೊಪ್ಪಿನ ಮಾತನಾಡಿ, ‘ಸಂಕ್ರಾಂತಿ ಪುಣ್ಯ ಕಾಲದಲ್ಲಿ ಜನರು ತೀರ್ಥ ಕ್ಷೇತ್ರಗಳಲ್ಲಿ ಪುಣ್ಯಸ್ನಾನ ಮಾಡುವುದು ಸಂಪ್ರದಾಯ. ನದಿ, ಪುಷ್ಕರಣಿ ಇತ್ಯಾದಿಗಳಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪೂ ಬಳಸುವುದರಿಂದ ನೀರಿನಲ್ಲಿ ವಿಷ ಸೇರುವ ಕಾರಣ ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ’ ಎಂದರು.

ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಚಂಬಣ್ಣ ಬಾಳಿಕಾಯಿ, ಸೋಮನಗೌಡ್ರ, ಎಸ್.ಎಸ್. ಪಾಟೀಲ, ಸುಭಾಸ ಓದುನವರ, ಎಸ್.ಜೆ. ಪುರಾಣಿಕಮಠ, ನಾರಾಯಣಸಾ ಪವಾರ, ಕಿರಣ ನವಲೆ, ರಂಗನಾಥ ಬದಿ, ಗಂಗಾಧರ ಮ್ಯಾಗೇರಿ, ದಿಗಂಬರ ಪೂಜಾರ, ಶಿವಯೋಗಿ ಮಾನ್ವಿ, ನಾಗರಾಜ ಪೂಜಾರ, ಬಸವರಾಜ ಬಿಂಕದಕಟ್ಟಿ, ಮುಳಗುಂದ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.