ADVERTISEMENT

ರಾಷ್ಟ್ರಭಕ್ತಿ ಹಿಂದೂಗಳಲ್ಲಿ ಪ್ರಜ್ವಲಿಸಲಿ: ಅಶೋಕ ನವಲಗುಂದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 15:29 IST
Last Updated 17 ಆಗಸ್ಟ್ 2023, 15:29 IST
ರೋಣ ಪಟ್ಟಣದಲ್ಲಿ ಕೇಸರಿ ನಂದನ ಸಂಘಟನೆಯಿಂದ ಅಖಂಡ ಭಾರತದ ಕಲ್ಪನೆಗಾಗಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ರೋಣ ಪಟ್ಟಣದಲ್ಲಿ ಕೇಸರಿ ನಂದನ ಸಂಘಟನೆಯಿಂದ ಅಖಂಡ ಭಾರತದ ಕಲ್ಪನೆಗಾಗಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.   

ರೋಣ: ‘ದೇಶವನ್ನು ಹೊಡೆದು ಆಳಲಿಚ್ಛಿಸುವ ರಾಜಕಾರಣಿಗಳಿಗೆ ಹಿಂದೂಗಳು ತಕ್ಕ ಪಾಠ ಕಲಿಸಬೇಕು. ಅಖಂಡ ಭಾರತದ ಕಲ್ಪನೆ, ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮ ಹಿಂದೂಗಳಲ್ಲಿ ಪ್ರಜ್ವಲಿಸುವಂತಾಗಲಿ’ ಎಂದು ಹಿಂದೂ ಪರ ಹಿರಿಯ ಮುಖಂಡ ಅಶೋಕ ನವಲಗುಂದ ಹೇಳಿದರು.

ಪಟ್ಟಣದ ಕೇಸರಿ ನಂದನ ಯುವಕರು ಸೋಮವಾರ ಹಮ್ಮಿಕೊಂಡಿದ್ದ ಅಖಂಡ ಭಾರತದ ಸಂಕಲ್ಪ ಯಾತ್ರೆಯ ಬೃಹತ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಶಾಂತಿಧೂತರಿಂದಷ್ಟೇ ಅಲ್ಲ. ಅದಕ್ಕೂ ಮೊದಲೇ ಕ್ರಾಂತಿಕಾರಿಗಳ ಹೋರಾಟಕ್ಕೆ ಬ್ರಿಟಿಷರು ಮಣಿದಿದ್ದರು. ಎಲ್ಲ ಹೋರಾಟಗಾರ ಫಲವೇ 1947 ರ ಸ್ವಾತಂತ್ರ್ಯ. ಆದರೆ ಬಹುಜನರ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳದೆ ನಿರಾಶೆ ತಂದಿದ್ದು ಮಾತ್ರ ಇಂದಿಗೂ ನೋವಿನ ಸಂಗತಿ’ ಎಂದರು.

ADVERTISEMENT

ಸಂಘದ ಪ್ರದಾನ ಕಾರ್ಯದರ್ಶಿ ರವಿ ಕೊಪ್ಪದ, ಸಂಜು ಉಳ್ಳಾಗಡ್ಡಿ, ಲೋಹಿತ್ ಕುಂಬಾರ, ಸಂತೋಷ ಪಲ್ಲೇದ, ಮಲ್ಲು ಸಂತೋಜಿ, ಶ್ರೀನಿವಾಸ್ ಮ್ಯಾಗೇರಿ ಸುನೀಲ ರಂಗರೇಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.