
ಪ್ರಜಾವಾಣಿ ವಾರ್ತೆಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಗದಗ: ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದ ಕಾರಣ ಗದಗ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾ ಆಯುಷ್ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.
ಬೆಟಗೇರಿಯಲ್ಲಿರುವ ಜಿಲ್ಲಾ ಆಯುಷ್ ಕಚೇರಿಗೆ ಬಂದ ಲೋಕಾಯುಕ್ತ ಪೊಲೀಸರು, ಕಚೇರಿಯಲ್ಲಿನ ಔಷಧಿ ಹಾಗೂ ದಾಖಲೆಗಳನ್ನು ಜಾಲಾಡಿದರು.
ಟೆಂಡರ್ ಕೊಡಿಸಲು 30 ಪರ್ಸೆಂಟ್ ಕಮಿಷನ್ ಕೇಳಿದ ಆರೋಪ ಎದುರಿಸುತ್ತಿರುವ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಕಚೇರಿಯಲ್ಲಿ ಇರಲಿಲ್ಲ.
‘ಟೆಂಡರ್ ಕೊಡಿಸಲು ಕಮಿಷನ್ ಕೇಳಿದ ಡಾ. ಜಯಪಾಲ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆಯುರ್ವೇದ ಔಷಧ ಪೂರೈಸಿರುವ ಕಂಪನಿ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.