
ಮುಳಗುಂದ: ‘ಸರ್ಕಾರದ ಆದೇಶದನ್ವಯ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣ, ಉರ್ದು ಭಾಷೆಯ ಜೊತೆಗೆ ಕನ್ನಡ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು’ ಎಂದು ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಹೇಳಿದರು.
ಇಲ್ಲಿಯ ಸವಳಬಾವಿ ಕಾಲೊನಿಯಲ್ಲಿ ಅಲ್-ಫಲಾಹ ಎಜುಕೇಶನ್ ಟ್ರಸ್ಟ್ ವತಿಯಿಂದ ಆರಂಭವಾದ ಅಲ್-ಫಲಾಹ ಅರಬ್ಬೀ ಮದರಸಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಜುಮನ್ ಅಧ್ಯಕ್ಷ ತಾಜ್ಜುದ್ದಿನ ಕಿಂಡ್ರಿ ಉದ್ಘಾಟಿಸಿದರು. ಈ ವೇಳೆ ಕಮೀಟಿ ಅಧ್ಯಕ್ಷ ಮಹ್ಮದ್ ನಯೀಮ್ ಡಾಲಾಯತ್, ಮೌಲಾನ್ ಜಾಂಗೀರ, ಮೌಲಾನ್ ಖುಷಾಹ್ಮದ ಮಹ್ಮದ್, ಇಸ್ಮಾಯಿಲ್ ಖಾಜಿ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಲ್. ಕರೇಗೌಡ್ರ, ಎಸ್.ಸಿ. ಬಡ್ನಿ, ಎಸ್.ಎಂ. ಬಳ್ಳಾರಿ, ಎ.ಡಿ. ಮುಜಾವರ, ಇಬ್ರಾಹಿಂಸಾಬ ಜಮಾಲಸಾಬನವರ, ಹಸನಸಾಬ ಶೇಖ, ಆರಿಪ್ ಖಾಜಿ, ಚಾಂದಸಾಬ ಅಕ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.