
ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪಟ್ಟಣದ ವಿನಾಯಕ ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 14 ಮತ್ತು 17ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ಕೊನೆಯಲ್ಲಿ 50 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.
ಬಾಲಕರ ಸಮಗ್ರ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆ ಪಡೆದರೆ, ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತನ್ನದಾಗಿಸಿಕೊಂಡಿತ್ತು. ಒಟ್ಟು ಐದು ವಿಭಾಗಗಳಲ್ಲಿ ವಿವಿಧ ತೂಕ ವಿಭಾಗದಲ್ಲಿ ಪ್ರತ್ಯೇಕ ‘ಫ್ರೀ ಸ್ಟೈಲ್’ ಕುಸ್ತಿ ಪಂದ್ಯಗಳು ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕರಿಗೆ ಮಾತ್ರ ‘ಗ್ರೀಕ್ ರೋಮನ್’ ಕುಸ್ತಿ ಪಂದ್ಯಾವಳಿಗಳು ನಡೆದವು.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟಾರೆ 892 ಬಾಲಕ, ಬಾಲಕಿಯರು ನೋಂದಾಯಿಸಿದ್ದರು. ಅದರಲ್ಲಿ 259 ಬಾಲಕಿಯರು (14 ವರ್ಷದೊಳಗಿನ 151 ಹಾಗೂ 17 ವರ್ಷದೊಳಗಿನ 139) ಹಾಗೂ 433 ಜನ ಬಾಲಕರು (14 ವರ್ಷದೊಳಗಿನ 151, 17 ವರ್ಷದೊಳಗಿನ 175 ಮತ್ತು ಗ್ರೀಕ್ ರೋಮನ್‍ಗೆ 107 ಜನ) ಸೇರಿದಂತೆ ಒಟ್ಟು 692 ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಚಿನ್ನದ ಪದಕ ಗಳಿಸಿದ 50 ಮಕ್ಕಳು ಮುಂದಿನ ತಿಂಗಳು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಂಗಾರ ಮತ್ತು ಬೆಳಿಗ್ಗೆ ಪದಕ ಪಡೆದವರು ಹೆಸರು ಕ್ರಮವಾಗಿ ಈ ಕೆಳಗಿನಂತಿದೆ.
14 ವರ್ಷದೊಳಗಿನ ಬಾಲಕರ ಕುಸ್ತಿ: 35 ಕೆ.ಜಿ ವಿಭಾಗದಲ್ಲಿ ಪೃಧ್ವಿರಾಜ್(ಬೆಳಗಾವಿ), ಅನಿಲ್‍ಕುಮಾರ್ (ಶಿವಮೊಗ್ಗ), 38 ಕೆ.ಜಿ ವಿಭಾಗ-ಮಲ್ಲಿಕಾರ್ಜುನ(ಬಾಗಲಕೋಟೆ), ವಿಠೋಬ (ಬೆಳಗಾವಿ), 41 ಕೆ.ಜಿ ವಿಭಾಗ-ಲೋಕೇಶ್ (ಧಾರವಾಡ), ಬಸವರಾಜ (ದಾವಣಗೆರೆ), 44 ಕೆ.ಜಿ ವಿಭಾಗ- ಅಭಿ ಯಲ್ಲಪ್ಪ (ಧಾರವಾಡ), ಸಮರ್ಥ (ದಾವಣಗೆರೆ), 48 ಕೆ.ಜಿ ವಿಭಾಗ- ರಾಜು ದೊಡ್ಡಮನಿ (ಬೆಳಗಾವಿ), ಲಕ್ಷ್ಮಣ (ಬಾಗಲಕೋಟೆ), 52 ಕೆ.ಜಿ ವಿಭಾಗ– ಪರಶುರಾಮ(ದಾವಣಗೆರೆ), ಸತೀಶ್(ಬೆಳಗಾವಿ), 57 ಕೆ.ಜಿ ವಿಭಾಗ–ಕಾರ್ತಿಕ್ (ದಾವಣಗೆರೆ), ಸಮರ್ಥ್ (ಬೆಳಗಾವಿ), 62 ಕೆ.ಜಿ ವಿಭಾಗ– ಭಗತ್(ದಾವಣಗೆರೆ), ಪ್ರವೀಣ(ಬಾಗಲಕೋಟೆ), 68 ಕೆ.ಜಿ ವಿಭಾಗ–ಲಕ್ಷ್ಮಣ (ದಾವಣಗೆರೆ), ದೀಪಕ್ (ಬಾಗಲಕೋಟೆ), 75 ಕೆ.ಜಿ ವಿಭಾಗ–ಮಹಾದೇವ್ (ಧಾರವಾಡ), ತೇಜಸ್(ಬೆಂಗಳೂರು ಗ್ರಾಮಾಂತರ).
14 ವರ್ಷದೊಳಗಿನ ಬಾಲಕಿಯರ ಕುಸ್ತಿ: 30 ಕೆ.ಜಿ ವಿಭಾಗ– ಶಿಕ್ಷಾ(ಮೈಸೂರು), ಕಲಾವತಿ (ಬಾಗಲಕೋಟೆ), 33 ಕೆ.ಜಿ ವಿಭಾಗ–ಸಂಧ್ಯಾ (ಉತ್ತರ ಕನ್ನಡ), ಸುಕನ್ಯಾ (ಗದಗ), 36 ಕೆ.ಜಿ ವಿಭಾಗ– ನವ್ಯಾ(ದಾವಣಗೆರೆ), ಅಷ್ಟಮಿ (ಬಾಗಲಕೋಟೆ), 39 ಕೆ.ಜಿ ವಿಭಾಗ–ಪ್ರಭಾವತಿ (ಧಾರವಾಡ), ಸಂಜನಾ(ಗದಗ), 42 ಕೆ.ಜಿ ವಿಭಾಗ– ಗಾಯತ್ರಿ(ಉತ್ತರ ಕನ್ನಡ), ದೇವಯಾನಿ (ಬೆಳಗಾವಿ), 46 ಕೆ.ಜಿ ವಿಭಾಗ– ರಿಯಾ ರಾಮದಾಸ್(ಉತ್ತರ ಕನ್ನಡ), ಸಜನಿ(ಉಡುಪಿ), 50 ಕೆ.ಜಿ ವಿಭಾಗ– ಸ್ನೇಹಾ(ಉತ್ತರ ಕನ್ನಡ), ಖುಷಿ(ಮೈಸೂರು), 54 ಕೆ.ಜಿ ವಿಭಾಗ–ಗಾಯತ್ರಿ (ಉತ್ತರ ಕನ್ನಡ), ತ್ರಿವೇಣಿ (ಗದಗ), 58 ಕೆ.ಜಿ ವಿಭಾಗ– ಶಿರಿನಾ(ಉತ್ತರ ಕನ್ನಡ), ಅಮೃತಾ(ಚಿಕ್ಕೋಡಿ), 62 ಕೆ.ಜಿ ವಿಭಾಗ– ತನುಜಾ(ಗದಗ), ಪುಣ್ಯ(ರಾಮನಗರ).
17 ವರ್ಷದೊಳಗಿನ ಬಾಲಕಿಯರ ಕುಸ್ತಿ: 40 ಕೆ.ಜಿ ವಿಭಾಗ– ಶರ್ಲಿನ್(ಶಿರಸಿ), ಗಂಗಮ್ಮ(ಧಾರವಾಡ), 43 ಕೆ.ಜಿ ವಿಭಾಗ– ವಾಣಿ(ಶಿರಸಿ), ಭಾರತಿ(ಚಿಕ್ಕೋಡಿ), 46 ಕೆ.ಜಿ ವಿಭಾಗ– ಜಾಹ್ನವಿ ಧಾರವಾಡ), ಸುಮಯಾ (ಶಿರಸಿ), 49 ಕೆ.ಜಿ ವಿಭಾಗ– ವೈಷ್ಣವಿ(ಶಿರಸಿ), ಚೈತನ್ಯ(ಧಾರವಾಡ), 53 ಕೆ.ಜಿ ವಿಭಾಗ– ಪುಷ್ಪಾ(ಬಾಗಲಕೋಟೆ), ನಂದಿನಿ(ಮೈಸೂರು), 57 ಕೆ.ಜಿ ವಿಭಾಗ– ಸಾನಿಕಾ(ಬೆಳಗಾವಿ), ರೇಣುಕಾ(ಗದಗ), 61 ಕೆ.ಜಿ ವಿಭಾಗ– ಫೃಥ್ವಿ(ಉತ್ತರ ಕನ್ನಡ), ಶರಣ್ಯ(ಬೆಳಗಾವಿ), 65 ಕೆ.ಜಿ ವಿಭಾಗ– ಆಕ್ಸಿಲಿಯಾ(ಉತ್ತರ ಕನ್ನಡ) ಬಂಧನಾದೇವಿ(ಉಡುಪಿ), 69 ಕೆ.ಜಿ ವಿಭಾಗ– ಕಲ್ಯಾಣಿ(ಬೆಳಗಾವಿ), ಲಕ್ಷ್ಮಿ(ಬಾಗಲಕೋಟೆ), 73 ಕೆ.ಜಿ ವಿಭಾಗ– ಶ್ರೇಯಾ(ಬೆಳಗಾವಿ), ಚೈತನ್ಯ(ಬಾಗಲಕೋಟೆ).
17 ವರ್ಷದೊಳಗಿನ ಬಾಲಕರ ಫ್ರೀ ಸ್ಟೈಲ್ ಕುಸ್ತಿ: 45 ಕೆ.ಜಿ ವಿಭಾಗ– ಮಾದೇಶ್(ಧಾರವಾಡ), ರಿಹಾನ್(ಬೆಳಗಾವಿ), 48 ಕೆ.ಜಿ ವಿಭಾಗ– ಶಂಕರ್ ಗೌಡ(ಉತ್ತರ ಕನ್ನಡ), ಆನಂದ್(ಬಾಗಲಕೋಟೆ), 51 ಕೆ.ಜಿ ವಿಭಾಗ– ಮೋಹನ್(ದಾವಣಗೆರೆ), ರಮೇಶ್(ದಕ್ಷಿಣ ಕನ್ನಡ), 55 ಕೆ.ಜಿ ವಿಭಾಗ– ಮುತ್ತು(ಬಾಗಲಕೋಟೆ), ಸಂಜು(ದಾವಣಗೆರೆ), 60 ಕೆ.ಜಿ ವಿಭಾಗ– ಚೇತನ್(ಧಾರವಾಡ), ರಫೀಕ್(ದಾವಣಗೆರೆ), 65 ಕೆ.ಜಿ ವಿಭಾಗ– ಶ್ರೇಯಸ್(ದಾವಣಗೆರೆ), ಶಿವಾಜಿ(ಧಾರವಾಡ), 71 ಕೆ.ಜಿ ವಿಭಾಗ–ಅಲ್ತಾಫ್(ವಿಜಯಪುರ), ಅಭಿಷೇಕ್(ಬೀದರ್), 80 ಕೆ.ಜಿ ವಿಭಾಗ–ಮನೋಜ್(ರಾಯಚೂರು), ಬಹುಷದ್ ಮಾನೆ(ಧಾರವಾಡ), 92 ಕೆ.ಜಿ ವಿಭಾಗ–ಸುರೇಶ್(ಬೆಳಗಾವಿ), ಎಚಿಡಿ ಖ್ವಾಸಿನ್(ದಕ್ಷಿಣ ಕನ್ನಡ), 110 ಕೆ.ಜಿ ವಿಭಾಗ–ಮಹಾದೇವ್(ಕೋಲಾರ), ಪ್ರದೀಪ್(ಬೆಂಗಳೂರು ದಕ್ಷಿಣ).
17 ವಯೋಮಿತಿಯ ಬಾಲಕರ ಗ್ರೀಕ್ ರೋಮನ್ ಕುಸ್ತಿ: 45 ಕೆ.ಜಿ ವಿಭಾಗ–ಕಪಿಲ್‍ಕುಮಾರ್(ಬೆಳಗಾವಿ), ಶಿವರಾಜ್(ವಿಜಯಪುರ), 48 ಕೆ.ಜಿ ವಿಭಾಗ–ಮಹಮ್ಮದ್(ಉತ್ತರ ಕನ್ನಡ), ಯಂಕಪ್ಪ(ಧಾರವಾಡ), 51 ಕೆ.ಜಿ ವಿಭಾಗ–ಸುದೀಪ್(ಧಾರವಾಡ), ಶಿವಪ್ಪ(ವಿಜಯಪುರ), 55 ಕೆ.ಜಿ ವಿಭಾಗ–ಮುತ್ತುರಾಜ್(ದಾವಣಗೆರೆ), ರಾಬಿನ್(ಉತ್ತರ ಕನ್ನಡ), 60 ಕೆ.ಜಿ ವಿಭಾಗ–ದಾದಾಪೀರ್(ಧಾರವಾಡ), ಆಕಾಶ್(ಬಾಗಲಕೋಟೆ), 65 ಕೆ.ಜಿ ವಿಭಾಗ–ತಿಮ್ಮೇಶ್(ದಾವಣಗೆರೆ), ಅರ್ಷದ್(ಚಿಕ್ಕೋಡಿ), 71 ಕೆ.ಜಿ ವಿಭಾಗ– ವಿನಯ್(ಬೆಳಗಾವಿ), ಭರಮನ್(ಬಾಗಲಕೋಟೆ), 80 ಕೆ.ಜಿ ವಿಭಾಗ– ಜೀವನ್(ದಾವಣಗೆರೆ), ಶಿವಾನಂದ(ಬಾಗಲಕೋಟೆ), 92 ಕೆ.ಜಿ ವಿಭಾಗ– ಹನುಮಂತ ವಿಠ್ಠಲ್(ದಾವಣಗೆರೆ), ಬಾಲೇಶ್(ಬೆಳಗಾವಿ), 110 ಕೆ.ಜಿ ವಿಭಾಗ– ಮೋಹನ್(ಬಾಗಲಕೋಟೆ), ರಾಹುಲ್(ಗದಗ).
ಪದಕ ವಿಜೇತರಿಗೆ ಶಾಸಕ ಕೆ.ನೇಮರಾಜ ನಾಯ್ಕ ಅವರು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ, ಪ್ರಮಾಣಪತ್ರ ವಿತರಿಸಿದರು.
ಆತಿಥೇಯರಿಗಿಲ್ಲ ಪ್ರಶಸ್ತಿ
ಆತಿಥೇಯ ವಿಜಯನಗರ ಜಿಲ್ಲೆಗೆ ಹಾಗೂ ಪಕ್ಕದ ಬಳ್ಳಾರಿ ಜಿಲ್ಲೆಯ ಸ್ಪರ್ಧಿಗಳಿಗೆ ಚಿನ್ನ ಅಥವಾ ಬೆಳ್ಳಿ ಪದಕ ಸಿಗಲಿಲ್ಲ. ಆದರೆ ಕುಸ್ತಿಯನ್ನು ಆಯೋಜಿಸುವ ಅವಕಾಶವನ್ನು ಸಮರ್ಥವಾಗಿ ಜಿಲ್ಲೆ ನಿಭಾಯಿಸಿತು. ಓದಿನ ಜತೆಗೆ ಕುಸ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತಮ್ಮ ನೆಲದಲ್ಲಿ ನಡೆದ ಪಂದ್ಯಾವಳಿಯ ದೃಶ್ಯಗಳು ಪ್ರೇರಕವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.