
ಬೆಳವಣಿಕಿ (ರೋಣ): ‘ಧಾರ್ಮಿಕ ಕಾರ್ಯಗಳು ಸಾಮಾನ್ಯ ಮನುಷ್ಯನನ್ನು ಮಹಾ ಮಾನವನನ್ನಾಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ಸಮಯದಲ್ಲಿ ಜನರು ಪರಸ್ಪರ ಸೇವಾ ಮನೋಭಾವ ಹಾಗೂ ಸೌರ್ಹಾದದಿಂದ ಕೂಡಿ ಕೆಲಸ ಮಾಡುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ’ ಎಂದು ಬೆನಹಾಳ ಸದಾಶಿವ ಮಹಾಂತ ಶಿವಾಚಾರ್ಯರು ತಿಳಿಸಿದರು.
ತಾಲ್ಲೂಕಿನ ಕೌಜಗೇರಿ ಗ್ರಾಮದಲ್ಲಿ ನೆಡದ ಮಾರುತೇಶ್ವರ ನೂತನ ರಥೋತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನರಗುಂದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಊರಿನಲ್ಲಿ ಏಕತೆ ಮೂಡಿಸುವುದರಲ್ಲಿ ಧಾರ್ಮಿಕ ಕಾರ್ಯಗಳು ಸಹಕಾರಿಯಾಗಿವೆ. ದಾನ ಧರ್ಮ ಮಾಡುವುದರಿಂದ ಜೀವನದಲ್ಲಿ ಶಾಂತಿ ನೆಮ್ಮದಿ ನೆಲಸುವುದರ ಮೂಲಕ ಸನ್ಮಾರ್ಗದಲ್ಲಿ ಸಾಗಬಹುದು’ ಎಂದು ಹೇಳಿದರು.
ಗದಗ ರಾಜೇಶ್ವರಿ ಸಂಗಮೇಶ ಸಜ್ಜನ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಹೊಳೆಆಲೂರಿನ ಕಲ್ಮೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಮಲ್ಲಿಕಾರ್ಜುನ ಬೇವೂರ ಉಪನ್ಯಾಸ ನೀಡಿದರು.
ಬಳಿಕ ಗಣ್ಯರಿಗೆ ಸನ್ಮಾನ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆದವು. ಇಬ್ರಾಹಿಂ ರೋಣದ ಸ್ವಾಗತಿಸಿದರು. ಬಸವರಾಜ ಸಜ್ಜನ ನಿರೂಪಿಸಿದರು. ಎಂ.ಜಿ.ಬಡಿಗೇರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.