ADVERTISEMENT

ಮುಳಗುಂದ | ಸಾಮೂಹಿಕ ವಿವಾಹದಿಂದ ಬಡವರಿಗೆ ವರದಾನ: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:12 IST
Last Updated 29 ಸೆಪ್ಟೆಂಬರ್ 2025, 5:12 IST
ಸೊರಟೂರ ಗ್ರಾಮದಲ್ಲಿ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್  ವತಿಯಿಂದ ನಡೆದ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹದಲ್ಲಿ ಸಮಾರಂಭದಲ್ಲಿ 11 ಜೋಡಿಗಳ ವಿವಾಹ ನೇರವೇರಿತು 
ಸೊರಟೂರ ಗ್ರಾಮದಲ್ಲಿ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್  ವತಿಯಿಂದ ನಡೆದ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹದಲ್ಲಿ ಸಮಾರಂಭದಲ್ಲಿ 11 ಜೋಡಿಗಳ ವಿವಾಹ ನೇರವೇರಿತು    

ಮುಳಗುಂದ : ಸಾಮೂಹಿಕ ವಿವಾಹದಲ್ಲಿ ನವ ವಧು ವರರಿಗೆ ಊರಿನ ದೈವವೆ ಬಂದು ಆರ್ಶೀವಾದಿಸುತ್ತದೆ. ಬಡ ಕುಟುಂಬಗಳಿಗೆ ಮದುವೆಯಿಂದ ಆಗುತ್ತಿದ್ದ ಆರ್ಥಿಕ ಸಾಲವನ್ನ ತಪ್ಪಿಸಿ, ಸಂತೋಷದಿಂದ ಮದುವೆ ಆಗುವ ಪದ್ದತಿಯೇ ಸಾಮೂಹಿಕ ವಿವಾಹವಾಗಿದೆ. ಎಂದು ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಸೊರಟೂರ ಗ್ರಾಮದಲ್ಲಿ ಶ್ರೀದುರ್ಗಾದೇವಿ ದಸರಾ ಮಹೋತ್ಸವದ ಅಂಗವಾಗಿ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್ ಹಾಗೂ ಸದ್ಭಕ್ತ ಮಂಡಳಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹಗಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ಮಠದ ಚನ್ನವೀರ ಸ್ವಾಮೀಜಿ,ಮಣಕವಾಡ ದೇವಮಂದಿರ ಅಬಿನವ ಮೃತ್ಯುಂಜಯ ಸ್ವಾಮೀಜಿ,ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಸ್ವಾಮೀಜಿ, ವರವಿ ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.

ADVERTISEMENT

ಸಾಮೂಹಿಕ ವಿವಾಹದಲ್ಲಿ ಒಟ್ಟು 11 ಜೋಡಿ ನವ ವಧು ವರರು ಹೊಸ ಜೀವನಕ್ಕೆ ಕಾಲಿರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.