ಗದಗ: ಜಿಲ್ಲೆಯ ಬೆಳದಡಿ, ಹಾತಲಗೇರಿ, ಸಂಭಾಪುರ, ಕಣವಿ, ಚಿಂಚಲಿ, ಕಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗಳಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮೀನುಮರಿ ಬಿತ್ತನೆ ಕಾರ್ಯ ಕೈಗೊಳ್ಳಲಾಯಿತು.
ಈ ವೇಳೆ 18,500 ಕಾಟ್ಲಾ ತಳಿಯ ಮರಿಗಳು ಮತ್ತು 18,500 ರೊಹು ತಳಿಯ ಮರಿಗಳು ಸೇರಿದಂತೆ ಒಟ್ಟು 37 ಸಾವಿರ ಮೀನುಮರಿಗಳನ್ನು ಬಿತ್ತನೆ ಮಾಡಲಾಯಿತು.
ಗದಗ ತಾಲ್ಲೂಕು ಪಂಚಾಯಿತಿ ವತಿಯಿಂದ ಸ್ವ ಸಹಾಯ ಸಂಘದ ಸದಸ್ಯರಿಗೆ ಜೀವನೋಪಾಯ ಮಾಡಿಕೊಳ್ಳಲು ಮೀನುಗಾರಿಕೆ ತರಬೇತಿ ನೀಡಿ, ಸಬ್ಸಿಡಿ ದರದಲ್ಲಿ ಮೀನುಗಳನ್ನು ಕೊಡಿಸಲಾಯಿತು.
ಜಿಲ್ಲಾ ಪಂಚಾಯಿತಿ ಜಿಲ್ಲಾ ವ್ಯವಸ್ಥಾಪಕ ಮಡ್ಡೇಶ ಮಲ್ಲಿಮಾರ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಿದ್ದು ಸತ್ಯಣ್ಣವರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಕರಿಗೌಡರ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ಬಿದ್ರಳ್ಳಿ, ಕಮಲವ್ವ, ಶಾರದಾ ಇನಾಮತಿ, ಗಂಗಮ್ಮ ನಾಯಕ, ಮಾದೇವಿ ಬಳಗೇರ, ಪಾರ್ವತಮ್ಮ, ಶರಣಮ್ಮ ಪಸಗಿಮಠ, ಠಾಕೂರ್ ಲಮಾಣಿ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಯಾದ ಗವಿಸಿದ್ದಪ್ಪ ಕಂದಗಲ್ಲ, ಬಸಪ್ಪ ಗಡಾದ, ಅಶ್ವಿನಿ ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.