ನರೇಗಲ್: ‘ಹನುಮಾನ್ ಚಾಲೀಸಾ ಪಠಣದಿಂದ ಜೀವನಕ್ಕೆ ಭದ್ರತೆ, ಭರವಸೆ ಸಿಗುತ್ತದೆ. ಈ ಪಠಣೆಯ ಮೂಲಕ ನಾವು ಶ್ರೀರಾಮನನ್ನು ತಲುಪಲು ಸಾಧ್ಯವಾಗುತ್ತದೆ’ ಎಂದು ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಮಹಾರಾಜರು ಹೇಳಿದರು.
ಪಟ್ಟಣದಲ್ಲಿ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ನಡೆದ ಅಖಂಡ 13 ತಾಸುಗಳ ಹನುಮಾನ್ ಚಾಲೀಸಾ ಪಠಣೆಗೆ ಸಂಕಲ್ಪ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
‘ಹನುಮಾನ್ ಚಾಲೀಸಾ ದಿವ್ಯ ಮಂತ್ರವಾಗಿದೆ. ಇದರ ಪಠಣೆಯಿಂದ ಎಂತಹ ದುರಾಚಾರಿಯಾದರೂ ಆತ ಸಾಧು ಗುಣವನ್ನು ಪಡೆಯುತ್ತಾನೆ. ಮನುಷ್ಯನ ಮನೆಗಳು ಬದಲಾದರೆ ಸಾಕಾಗದು, ಅದರೊಂದಿಗೆ ಅವರ ಮನಸ್ಸುಗಳೂ ಬದಲಾಗಬೇಕು. ನಮ್ಮ ಸಂಕುಚಿತ ದೃಷ್ಟಿಯನ್ನು ತ್ಯಜಿಸಿ ನಾವುಗಳು ಸಮಗ್ರ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ವೃಕ್ಷದಂತೆ ಮನುಷ್ಯ ನಿಸ್ವಾರ್ಥಿಯಾಗಬೇಕು. ಎಲ್ಲವೂ ನನಗಿರಲಿ, ಎಲ್ಲವೂ ನನ್ನದೇ ಆಗಿರಲಿ ಎಂಬ ಮನೋಭಾವನೆ ತೊಡೆದು ಹಾಕಬೇಕು’ ಎಂದರು.
ಅರುಣ ಬಿ. ಕುಲಕರ್ಣಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜಿ.ಕೆ.ಕಾಳೆ, ಅಧ್ಯಕ್ಷ ಶ್ರೀಪಾಧಭಟ್ಟ ಜೋಶಿ, ಕಾರ್ಯದರ್ಶಿ ಕೃಷ್ಣಾ ಕಾಳೆ, ಶ್ರೀದತ್ತ ಭಕ್ತ ಮಂಡಳಿ ಅಧ್ಯಕ್ಷ ನಾಗರಾಜ ಗ್ರಾಮಪುರೋಹಿತ, ಕಾರ್ಯದರ್ಶಿ ರಘುನಾಥ ಕೊಂಡಿ, ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ನಾಗೇಶಭಟ್ಟ ಗ್ರಾಮಪುರೋಹಿತ, ಚಂದ್ರಾಮ ಗ್ರಾಮಪುರೋಹಿತ, ಎಸ್.ಕೆ. ಕುಲಕರ್ಣಿ, ಆನಂದ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.