
ರೋಣ: ‘ರೈತರು ಆಧುನಿಕ ಕೃಷಿ ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ದೇಶದ ಮೂಲ ಕೃಷಿ ಪದ್ದತಿಯನ್ನು ಯುವಪೀಳಿಗೆ ಬೆಳೆಸಬೇಕು’ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸವಡಿ ರಸ್ತೆಯಲ್ಲಿರುವ ಪ್ರಗತಿಪರ ರೈತ ಮಲ್ಲಯ್ಯ ಮಹಾಪುರಷಮಠ ಅವರ ಜಮೀನಿನಲ್ಲಿ ನಡೆದ ಜವಾರಿ ತಳಿಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ರೈತ ಮಲ್ಲಯ್ಯ ಮಹಾಪುರುಷಮಠ ಅವರು ಬೆಳೆದ ದೇಶಿಯ ಜವಾರಿ ತಳಿ ಬೆಳೆಗಳನ್ನು ಸಂಶೋದನೆ ಮಾಡಲಾಗಿದ್ದು, ಕೃಷಿ ವಿಜ್ಞಾನಿಗಳು ಬೆಳೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದರು.
ಪ್ರಗತಿಪರ ರೈತ ಮಲ್ಲಯ್ಯ ಮಹಾಪುರಷಮಠ ಮಾತನಾಡಿ, ‘ಜಮೀನಿನಲ್ಲಿ ಕೆಂಜೋಳ, ಜವಾರಿ ಕಡಲೆ, ಜವಾರಿ ಗೋದಿ ಬೆಳೆಯಲಾಗಿದ್ದು, ರೈತರು ಜವಾರಿ ತಳಿ ಬೆಳೆಯಲು ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.
ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್.ಪಾಟೀಲ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಎಸ್.ಎಲ್.ಪಾಟೀಲ, ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಸಿ.ರಫಿ, ಗದಗ ಕೃಷಿ ಸಂಶೋಧನೆ ಮತ್ತು ಕೀಟ ಶಾಸ್ತ್ರಜ್ಞೆ ಕಲಾವತಿ ಕಂಬಳಿ, ನಿವೃತ್ತ ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಶ ಕುಂಬಾರ, ಅಕ್ಷಯ ಪಾಟೀಲ, ಎಚ್.ಎಸ್.ಸೊಂಪೂರ, ಸಿದ್ದಣ್ಣ ಬಂಡಿ, ಬಸವರಾಜ ನವಲಗುಂದ, ಕೃಷಿ ಸಹಾಯಕ ನಿರ್ದೇಶಕ ಎಸ್.ಎಫ್.ತಹಶೀಲ್ದಾರ್, ಕೃಷಿ ಅಧಿಕಾರಿ ಶಿವಪುತ್ರಪ್ಪ ದೊಡ್ಡಮನಿ, ಪರತಗೌಡ ರಾಯನಗೌಡ್ರ, ಬಸವರಾಜ ಕಿರೆಸೂರ, ಬಸವಣ್ಣೆಪ್ಪ ದೊಡ್ಡಣ್ಣವರ, ಮಹಾದೇವಪ್ಪ ಅಬ್ಬಿಗೇರಿ, ಮುತ್ತಣ್ಣ ಕಳಸಣ್ಣವರ, ಮುತ್ತಪ್ಪ ಆದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.