ADVERTISEMENT

ಡಂಬಳ: ಬರಗಾಲದಲ್ಲಿಯೂ ದಾಖಲೆ ಪ್ರಮಾಣದ ಮೆಕ್ಕೆಜೋಳ ಆವಕ

ಲಕ್ಷ್ಮಣ ದೊಡ್ಡಮನಿ
Published 21 ಡಿಸೆಂಬರ್ 2023, 7:13 IST
Last Updated 21 ಡಿಸೆಂಬರ್ 2023, 7:13 IST
ಮುಂಡರಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ರೈತರು ಮೆಕ್ಕೆಜೋಳ ಮಾರಾಟ ಮಾಡಲು ತಂದಿರುವದನ್ನು ಹಮಾಲರು ಖರೀದಿ ಮಾಡಿಕೊಳ್ಳುತ್ತಿರುವ ಚಿತ್ರಣ.
ಮುಂಡರಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ರೈತರು ಮೆಕ್ಕೆಜೋಳ ಮಾರಾಟ ಮಾಡಲು ತಂದಿರುವದನ್ನು ಹಮಾಲರು ಖರೀದಿ ಮಾಡಿಕೊಳ್ಳುತ್ತಿರುವ ಚಿತ್ರಣ.   

ಡಂಬಳ: ಭೀಕರ ಬರಗಾಲದ ಹಣೆಪಟ್ಟಿ ಹಚ್ಚಿಕೊಂಡಿರುವ ಮುಂಡರಗಿ ತಾಲ್ಲೂಕು ನಂಜುಂಡಪ್ಪನವರ ವರದಿ ಪ್ರಕಾರ ರಾಜ್ಯದಲ್ಲಿಯೇ ಕಡೆಯ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಮಳೆಯಾಶ್ರಿತ ಜಮೀನುಗಳೇ ಇಲ್ಲಿ ಹೆಚ್ಚಿರುವುದರಿಂದ ಉತ್ತಮ ಮಳೆಯಾದರೆ ಮಾತ್ರ ಬೆಳೆ ಕಾಣುವ ಪರಿಸ್ಥಿತಿ ಇದೆ. ಕೆಲವು ಕಡೆ ಕೊಳವೆಬಾವಿ, ನದಿ ಸೇರಿದಂತೆ ವಿವಿಧ ಜಲಮೂಲಗಳ ಅಲ್ಪಪ್ರಮಾಣದ ನೀರಾವರಿ ಕ್ಷೇತ್ರವಿದೆ.

ಈ ಸಾರಿ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿವೆ. ಸರ್ಕಾರ ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಆದರೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇದರ ಮಧ್ಯೆ ಕಡಿಮೆ ತೇವಾಂಶದಲ್ಲಿ ಬೆಳೆಯುವ ವಿವಿಧ ಬೆಳೆಗಳನ್ನು ಶೇ 40ರಷ್ಟು ರೈತರು ಬೆಳೆದಿರುವುದು ಆಶಾಭಾವ ಮೂಡಿಸಿದೆ.

ADVERTISEMENT

ಮುಂಡರಗಿ ಎಂಪಿಎಂಸಿ ಮಾರುಕಟ್ಟೆಗೆ ಹೆಚ್ಚು ಆವಕವಾಗಿದೆ. ಇಲ್ಲಿ ಇ–ಟೆಂಡರ್‌ ಆಗುವುದರಿಂದ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ರೈತರು ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ.

‘ಮುಂಡರಗಿ ಎಪಿಎಂಸಿಯಿಂದ ರೈತರಿಗೆ ಯೋಗ್ಯ ದರ ದೊರೆಯುತ್ತದೆ ಮತ್ತು ಪಾರದರ್ಶಕತೆ ಇರುತ್ತದೆ’ ಎನ್ನುತ್ತಾರೆ ರೈತರಾದ ಎನ್ನುತ್ತಾರೆ ಡಂಬಳದ ಸಣ್ಣಹನಮಪ್ಪ ಬಂಡಿ. ವಿರುಪಾಕ್ಷಪ್ಪ ಯಲಿಗಾರ ಮತ್ತು ಹಿರೇವಡ್ಡಟ್ಟಿ ಗ್ರಾಮದ ಉಮೇಶ ಅಂಕದ.

ಹಮಾಲರ ಚಾರ್ಜ್‌: ‘ಒಂದು ಶೇಂಗಾ ಚೀಲಕ್ಕೆ ₹ 3, ಮೆಕ್ಕೆಜೋಳ, ಸೂರ್ಯಕಾಂತಿ ಇತರೆ ಬೆಳೆಗೆ ಪ್ರತಿ ಚೀಲಕ್ಕೆ ₹ 4 ದರ ನಿಗದಿ ಮಾಡಲಾಗಿದೆ. ಹಮಾಲರು ಸೇರಿದಂತೆ ಕಸ ಹೊಡೆಯುವವರು ಸೇರಿ ಒಟ್ಟು ಅಂದಾಜು 200 ಕಾರ್ಮಿಕರು ದುಡಿಯುತ್ತೇವೆ. ಸೀಜನಲ್ಲಿ ಕೂಲಿ ಉತ್ತಮವಾಗಿ ದೊರೆಯುವುದರಿಂದ ಕುಟುಂಬ ನಿರ್ವಾಹಣೆಗೆ ಆಸರೆಯಾಗುತ್ತದೆ’ ಎನ್ನುತ್ತಾರೆ ಮುಂಡರಗಿ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಹಾಲಪ್ಪ ಗದಗ.

ಮೆಕ್ಕೆಜೋಳ ಖರೀದಿ ಮಾಡಿದ ಚೀಲವನ್ನು ತುಂಬಿದ ನಂತರ ವಿಶ್ರಾಂತಿ ಪಡೆಯುತ್ತಿರುವ ಹಮಾಲರು.
ಇ ಟೆಂಡರ್‌ ಮೂಲಕ ಖರೀದಿ ಪ್ರಕ್ರಿಯೆ ವಿವಿಧ ಬೆಳೆಗಳು ಎಪಿಎಂಸಿಗೆ ಹೆಚ್ಚು ಆವಕ ಪಾರದರ್ಶಕತೆಗೆ ಅಗತ್ಯ ಕ್ರಮ: ಉತ್ತಮ ಪ್ರತಿಕ್ರಿಯೆ
ಮುಂಡರಗಿ ಎಪಿಎಂಸಿ ಅತಿ ಹೆಚ್ಚು ಮಾರುಕಟ್ಟೆ ಕರ ವಸೂಲಿ ಆಗುತ್ತದೆ. ನಿತ್ಯ ಹೆಚ್ಚು ಬೆಳೆ ಆವಕವಾಗುತ್ತಿದೆ. ಇ ಟೆಂಡರ್‌ ವ್ಯವಸ್ಥೆಇದಕ್ಕೆ ಕಾರಣ
ರಾಘವೇಂದ್ರ ಜಾಲಿಹಳ್ಳಕರ ಎಪಿಎಂಸಿ ಕಾರ್ಯದರ್ಶಿ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.