ADVERTISEMENT

ಶ್ರದ್ಧಾ, ಭಕ್ತಿಯ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 15:29 IST
Last Updated 21 ಸೆಪ್ಟೆಂಬರ್ 2018, 15:29 IST
ಮೊಹರಂ ಅಂಗವಾಗಿ ಗದಗ ತಾಲ್ಲೂಕಿನ ಲಕ್ಕುಂಡಿಯಲ್ಲಿ ಸಂಗಮಗೊಂಡ ಡೋಲಿ, ಪಾಂಜಾಗಳು
ಮೊಹರಂ ಅಂಗವಾಗಿ ಗದಗ ತಾಲ್ಲೂಕಿನ ಲಕ್ಕುಂಡಿಯಲ್ಲಿ ಸಂಗಮಗೊಂಡ ಡೋಲಿ, ಪಾಂಜಾಗಳು   

ಗದಗ:ಭಾವೈಕ್ಯದ ಸಂಕೇತವಾದ ಮೊಹರಂ ಆಚರಣೆ ಶುಕ್ರವಾರ ನಗರ ಹಾಗೂ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಹಸನ್ -ಹುಸೇನ್‌ ತ್ಯಾಗ,ಬಲಿದಾನಗಳನ್ನು ಸ್ಮರಿಸಿ ನಗರದ ಇರಾನಿ ಕಾಲೊನಿ ಮುಸ್ಲಿಮರು ಶೋಕಾಚರಣೆ ಮಾಡಿದರು. ಮೆರವಣಿಗೆಯುದ್ದಕ್ಕೂ ಕಣ್ಣೀರು ಸುರಿಸಿದರು. ಯುವಕರು ಶೋಕಗೀತೆ ಹಾಡುತ್ತ, ಹರಿತವಾದ ವಸ್ತುಗಳನ್ನು ದೇಹಕ್ಕೆ ಹೊಡೆದುಕೊಂಡು ರಕ್ತ ಹರಿಸಿದರು.

ನಗರದ ಮಾಬುಸುಬಾನಿ ಕಟ್ಟೆ, ಜುಮ್ಮಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್‍ತೋಟ, ಮುಕ್ತುಂ ಗರಡಿ, ಹಳೇ ಕಚೇರಿ, ಹನುಮನ ಗರಡಿ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಿದ್ದ ಪಾಂಜಾಗಳು ಹಾಗೂ ಡೋಲಿಗಳ ಮೆರವಣಿಗೆ ನಡೆಯಿತು.

ADVERTISEMENT

ನಗರದ ಕಾಗದಗೇರಿ ಓಣಿಯಲ್ಲಿರುವ ಬಾವಿ ಹಾಗೂ ಮುಕ್ತುಮ್ ಬಾವಡಿಯಲ್ಲಿ ಹಲವು ತಾಬೂತ್‍ಗಳು ಸಮಾವೇಶಗೊಂಡವು. ಬಳಿಕ ವಿಧಿವತ್ತಾಗಿ ಪಾಂಜಾಗಳನ್ನು ಹೊಳೆಗೆ ಕಳುಹಿಸಲಾಯಿತು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಿಂದೂ–ಮುಸ್ಲಿಮರು ಒಟ್ಟಾಗಿ ಮೊಹರಂ ಆಚರಿಸಿ ಸೌಹಾರ್ದ ಮೆರೆದರು.ಯುವಕರು ಹಾಗೂ ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ, ಅಳ್ಳೊಳ್ಳಿ ಬವ್ವಾ, ಹುಲಿ ವೇಷ ಧರಿಸಿ ಭಕ್ತಿ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.