ADVERTISEMENT

ಮುಳಗುಂದ | ಕಳವು ಪ್ರಕರಣ: 6 ಬೈಕ್ ಜಪ್ತಿ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:57 IST
Last Updated 15 ಅಕ್ಟೋಬರ್ 2025, 5:57 IST
<div class="paragraphs"><p>ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿ ಸೇರಿ ವಿವಿಧೆಡೆ ನಡೆದ ಬೈಕ್ ಕಳ್ಳತನ ಪ್ರಕರಣ ಭೇದಿಸಿದ&nbsp;ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದ ಪೊಲೀಸ್ ತಂಡ, ಪತ್ತೆ ಮಾಡಿ ವಶಕ್ಕೆ ಪಡದ ಬೈಕ್‌ಗಳು</p></div>

ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿ ಸೇರಿ ವಿವಿಧೆಡೆ ನಡೆದ ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದ ಪೊಲೀಸ್ ತಂಡ, ಪತ್ತೆ ಮಾಡಿ ವಶಕ್ಕೆ ಪಡದ ಬೈಕ್‌ಗಳು

   

ಮುಳಗುಂದ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿ ಸೇರಿ ವಿವಿಧಡೆ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಮುಳಗುಂದ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ ₹ 3 ಲಕ್ಷ ಮೌಲ್ಯದ 6 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಳಗುಂದದಲ್ಲಿ 1, ಗದಗ ಗ್ರಾಮೀಣ ವ್ಯಾಪ್ತಿಯಲ್ಲಿ 3, ಹಾನಗಲ್ ಠಾಣೆ ವ್ಯಾಪ್ತಿಯಲ್ಲಿ 1, ಮುಂಡರಗಿ ವ್ಯಾಪ್ತಿಯಲ್ಲಿ 1 ಒಟ್ಟು 6 ಬೈಕ್ ಗಳ ಕಳ್ಳತನ ಮಾಡಿದ್ದ ಪ್ರಕರಣ ಭೇದಿಸಿದ ಮುಳಗುಂದ ಠಾಣೆ ಪೊಲೀಸರ ತಂಡ, ಅಣ್ಣಿಗೇರಿ ಪಟ್ಟಣದ ಗಿರೀಶ ನಿಂಗಪ್ಪ ಗೋಡಿಕಟ್ಟಿ(32) ಎನ್ನುವ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಪಿಐ ಸಂಗಮೇಶ ಶಿವಯೋಗಿ ಮಾಹಿತಿ ನೀಡಿದರು.

ತನಿಖಾ ತಂಡದಲ್ಲಿ ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್‍ಐ ಡಿ.ಎಂ.ಮುಲ್ಲಾ, ಸಿಬ್ಬಂದಿ ಗುರು ಬೂದಿಹಾಳ, ಸಂಜು ಕೊರಡೂರ, ಬಿ.ಎಂ.ಕುರ್ತಕೋಟಿ, ಗಣೇಶ ಪುರೋಹಿತ, ಎಂ.ಆರ್.ಲಮಾಣಿ, ಎನ್.ಕೆ.ಸವಳಬಾವಿ ಕರ್ತವ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.