ಮುಂಡರಗಿ: ಜನಔಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರು ಶನಿವಾರ ಕಪ್ಪು ಪಟ್ಟಿ ಧರಸಿ ಪ್ರತಿಭಟನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಜನಔಷಧಿ ಕೇಂದ್ರಗಳನ್ನು ತೆರೆಯಲು ಅನಕೂಲ ಮಾಡಿದರು. ಜನ ವಿರೋಧಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರಗಳನ್ನು ಮುಚ್ಚುವ ಮೂಲಕ ಬಡ ಜನರ ಆರೋಗ್ಯದ ಜೊತೆಗೆ ಚಲ್ಲಾಟವಾಡಲು ಮುಂದಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
ಜನಔಷಧಿ ಕೇಂದ್ರಗಳು ಜನರಿಗೆ ಕಡಿಮೆ ಬೆಲೆಗೆ ಉತ್ತಮ ಉಣಮಟ್ಟದ ಔಷಧ ಪೂರೈಸುತ್ತಲಿವೆ. ಕಾಂಗ್ರೆಸ್ ಸರ್ಕಾರವು ಖಾಸಗಿ ಔಷಧಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಬಡ ಜನತೆಗೆ ಅನ್ಯಾಯ ಮಾಡುತ್ತಲಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸದಿದ್ದರೆ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಡಂಬಳ ಮಂಡಳದ ಅಧ್ಯಕ್ಷ ಅಂದಪ್ಪ ಹಾರೂಗೇರಿ, ಮುಖಂಡರಾದ ವೆಂಕನಗೌಡ ಪಾಟೀಲ ಮುದ್ಲಿಂಗಪ್ಪ ಕೊರ್ಲಹಳ್ಳಿ, ಸಿದ್ದನಗೌಡ ಪಾಟೀಲ, ಪಾಂಡಪ್ಪ ಚವ್ಹಾಣ, ಟಾಕರೆಪ್ಪ ಲಮಾಣಿ, ಈರಪ್ಪ ಅರಕಾಲ, ಮೈಲಾರಪ್ಪ ನೋಟಗಾರ, ಅಂದಪ್ಪ ಸೋಗಿ, ಪಂಚಾಕ್ಷರಿ ಹರ್ಲಾಪೂರಮಠ, ಶಿವಾನಂದ ಬಂಡಿ, ಪ್ರಕಾಶ ಕೊತಂಬರಿ, ರಾಜೇಶ ಅರಕಾಲ, ಪ್ರಭು ಕೊರ್ಲಹಳ್ಳಿ, ಶಿವಾನಂದ ಹರಿಜನ, ಸೋಮಯ್ಯ ಹಿರೇಮಠ, ಶಂಭು ಸಂದಿಗೋಡ, ಲಕ್ಷ್ಮಣ ಬೂದಿಹಾಳ, ಪ್ರಮೋದ ನಾಡಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.