ADVERTISEMENT

ಮುಂಡರಗಿ | ಶಾಸಕರ ಆರೋಪ ಮುಕ್ತಿಗೆ ದೇವಿ ಮೊರೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:50 IST
Last Updated 25 ಫೆಬ್ರುವರಿ 2026, 6:50 IST
ಶಾಸಕ ಡಾ.ಚಂದ್ರು ಲಮಾಣಿ ಅವರು ಆರೋಪಮುಕ್ತರಾಗಲಿ ಎಂದು ಹಾರೈಸಿ ಬಿಜೆಪಿ ಕಾರ್ಯಕರ್ತರು ಮುಂಡರಗಿ ಪಟ್ಟಣದ ಬನಶಂಕರಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು
ಶಾಸಕ ಡಾ.ಚಂದ್ರು ಲಮಾಣಿ ಅವರು ಆರೋಪಮುಕ್ತರಾಗಲಿ ಎಂದು ಹಾರೈಸಿ ಬಿಜೆಪಿ ಕಾರ್ಯಕರ್ತರು ಮುಂಡರಗಿ ಪಟ್ಟಣದ ಬನಶಂಕರಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು   

ಮುಂಡರಗಿ: ಶಾಸಕ ಡಾ.ಚಂದ್ರು ಲಮಾಣಿ ಅವರು ಆರೋಪಮುಕ್ತರಾಗಲಿ ಎಂದು ಹಾರೈಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪಟ್ಟಣದ ಬ್ರಾಹ್ಮಣರ ಓಣಿಯಲ್ಲಿರುವ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಜ್ಯೋತಿ ಹಾನಗಲ್ಲ, ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ಪವನ ಲೇಂಡ್ವೆ, ನಾಗರಾಜ ಹಾನಗಲ್ಲ, ಅಶೋಕ ಚೂರಿ, ಅಮರಗೋಳ ಹಿರೇಮಠ, ದೇವಾಂಗ ಸಮಾಜದ ಅಧ್ಯಕ್ಷ ಕೆ.ಟಿ.ಗುಬ್ಬಿ, ಬಿ.ನಾಗರಾಜ, ಲೋಕಪ್ಪ ದೂತರಗಾವಿ, ಮಲ್ಲಪ್ಪ ದೂತರಾಗಾವಿ, ಶಂಕ್ರಪ್ಪ ಹುಳ್ಳಿ, ಫಕೀರಪ್ಪ ಹುಳ್ಳಿ, ಉಮೇಶ ಹಡಗಲಿ, ನಾರಾಯಣಪ್ಪ ಗುಬ್ಬಿ, ಬಸವರಾಜ ಮನಗೂಳಿ, ಕೃಷ್ಣಮೂರ್ತಿ ದೂತರಗಾವಿ ಉಪಸ್ಥಿತರಿದ್ದರು.

ಬಂಧನ ಉದ್ದೇಶ ಪೂರಿತ: ‌‘ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರ ಬೆಳವಣಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಒಗ್ಗೂಡಿ ಉದ್ದೇಶಪೂರ್ವಕವಾಗಿ ಅವರನ್ನು ಲೋಕಾಯುಕ್ತ ಬಲಗೆ ಸಿಲುಕಿಸಿದ್ದಾರೆ’ ಎಂದು ಬಂಜಾರ ಸಮಾಜದ ಮುಖಂಡ ಸುಭಾಷ ಗುಡಿಮನಿ ಆರೋಪಿಸಿದ್ದಾರೆ.

ADVERTISEMENT

‌‌ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಲೋಕಾಯುಕ್ತರು ಪ್ರಕರಣವನ್ನು ಸಮಗ್ರ ತನಿಖೆ ಮಾಡಿ ಷಡ್ಯಂತ್ರದ ಹಿಂದಿರುವ ಕರಾಳ ಮುಖಗಳನ್ನು ಬಯಲಿಗೆಳೆಯಬೇಕು. ಶಾಸಕ ಡಾ.ಚಂದ್ರು ಲಮಾಣಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.