ನರೇಗಲ್ (ಗದಗ ಜಿಲ್ಲೆ): ತೋಟಗಂಟಿ ಗ್ರಾಮದಲ್ಲಿ ಅನ್ನದಾನೇಶ್ವರ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ 5 ಅಡಿ ಎತ್ತರದ ಸಾರ್ವಜನಿಕ ಗಣಪತಿ ಮೂರ್ತಿಯ ಸುತ್ತಮುತ್ತ ಇಲಿ ಮರಿಯೊಂದು ಓಡಾಡುತ್ತಿದೆ. ಅದನ್ನು ಎತ್ತಿಕೊಂಡು ಸಮೀಪದ ಖಾಲಿ ಜಾಗದಲ್ಲಿ ಬಿಟ್ಟರೂ ಪುನಃ ಮೂರ್ತಿಯ ಕಡೆ ಬರುತ್ತಿದೆ.
‘ಕಿನ್ನಾಳ ಗ್ರಾಮದಿಂದ ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ತಂದೆವು. ಆದರೆ, ಅದರೊಂದಿಗೆ ಮೂಷಕ (ಇಲಿ) ಮಾಡುವುದನ್ನು ಕಲಾವಿದರು ಮರೆತಿದ್ದರು. ಮೂರ್ತಿಯನ್ನು ಕೆಳಗಿಳಿಸಿ, ಪ್ರತಿಷ್ಠಾಪಿಸಿದಾಗ ಇಲಿಮರಿ ಕಂಡಿತು. ಅದನ್ನು ಕೈಯಲ್ಲಿ ಹಿಡಿದು, ಬೇರೆಡೆ ಬಿಟ್ಟರೂ ಹೋಗಲಿಲ್ಲ. ಅದಕ್ಕೆ, ಹಣ್ಣು, ಧಾನ್ಯ ಮತ್ತು ಬೀಜದಂತಹ ಆಹಾರ ನೀಡಿ ಅಲ್ಲಿಯೇ ಅದನ್ನು ಓಡಾಡಲು ಬಿಟ್ಟಿದ್ದೇವೆ’ ಎಂದು ಗ್ರಾಮಸ್ಥ ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲಿ ಬಹುಶಃ ಭಯದಿಂದ ಬೇರೆಡೆ ಹೋಗುತ್ತಿಲ್ಲ. ಆಶ್ರಯಕ್ಕಾಗಿ ಗಣಪತಿ ಮೂರ್ತಿ ಬಳಿ ಬಂದಿರಬಹುದು. ಸಹಜ ಸ್ಥಿತಿಗೆ ಬಂದ ಬಳಿಕ, ಅದು ಅಲ್ಲಿಂದ ಹೋಗುತ್ತದೆ. ತೊಂದರೆ ನೀಡದೇ, ಅದನ್ನು ಅದರ ಪಾಡಿಗೆ ಬಿಟ್ಟರೆ ಒಳ್ಳೆಯದು’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.