ನರೇಗಲ್: ‘ಮಹಾವೀರರು ತಮ್ಮ ಜೀವನದ ಮೂಲಕ ಅಹಿಂಸೆ, ಸತ್ಯ, ಕರುಣೆ ಮತ್ತು ಸ್ವಯಂ ಕೃಷಿಯ ತತ್ವಗಳನ್ನು ನಮಗೆ ನೀಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.
‘ಅಹಿಂಸೆಯು ಕೇವಲ ದೈಹಿಕ ಹಿಂಸೆಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿಯ ಆಲೋಚನೆಗಳು, ಮಾತು ಮತ್ತು ಕಾರ್ಯಗಳನ್ನೂ ಪ್ರತಿನಿಧಿಸುತ್ತದೆ. ಭೌತಿಕ ವಸ್ತುಗಳ ಮೇಲಿನ ಬಾಂಧವ್ಯವು ದುಃಖಕ್ಕೆ ಕಾರಣವಾಗುತ್ತದೆ ಎಂಬುದು ಅವರ ಬೋಧನೆಯಾಗಿದೆ. ಆದ್ದರಿಂದ, ಯಾವುದರ ಮೇಲೂ ಅತಿಯಾಗಿ ಆಸೆಯನ್ನು ಇಟ್ಟುಕೊಳ್ಳದೇ ಬದುಕುವುದು ಸಂತೋಷದ ಮಾರ್ಗವಾಗಿದೆ’ ಎಂದರು.
ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ಮಹಾವೀರರು ಸತ್ಯವೇ ಮೋಕ್ಷಕ್ಕೆ ಮೊದಲ ದಾರಿಯೆಂದು ಹೇಳಿದ್ದಾರೆ. ತನ್ನನ್ನು ತಾನು ಜಯಿಸಿಕೊಳ್ಳುವವನೇ ನಿಜವಾದ ವಿಜೇತ ಎಂಬ ಮಹತ್ವವನ್ನು ತಿಳಿಸಿದ್ದಾರೆ ಎಂದರು.
ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಚುನಾಯಿತ ಸದಸ್ಯರು, ಜೈನ್ ಸಮಾಜದ ಮುಖಂಡರು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.