ಲಕ್ಷ್ಮೇಶ್ವರ: ಪಟ್ಟಣದ ಭರತನಾಟ್ಯ ಬಾಲ ಕಲಾವಿದೆ ತೇಜೋಮಯಿ ರಾ. ಗದ್ದಿ ಇವಳಿಗೆ ನ್ಯಾಷನಲ್ ಐಕಾನ್ ಅವಾರ್ಡ್-2025 ಲಭಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೇ 11ರಂದು ಧಾರವಾಡದ ಕನ್ನಡ ಸಾಂಸ್ಕೃತಿಕ ಇಲಾಖೆ ಕರ್ನಾಟಕ ಕುಲ ಪುರೋಹಿತ ಆಲೂರ ವೆಂಕಟರಾಯರ ಸಭಾಭವನದಲ್ಲಿ ಜರುಗಿದ ಬಸವಣ್ಣ ಹಾಗೂ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ತೇಜೋಮಯಿ ಪ್ರಶಸ್ತಿ ಸ್ವೀಕರಿಸಿದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.