ಮುಳಗುಂದ : ಇಲ್ಲಿನ ಭಾವಸಾರ ಕ್ಷತ್ರಿಯ ಸಮಾಜದ ಶ್ರೀಮುರಳಿಧರ ಹರಿ ಮಂದಿರದಲ್ಲಿ ಶ್ರೀಗುರು ನಿವೃತ್ತಿನಾಥ ಮಹಾರಾಜರ ಸಮಾಧಿ ಸೋಹಳಾ ನಿಮಿತ್ತ ಗುಲಾಲ ಭಜನೆಯೊಂದಿಗೆ ದಿಂಡಿ ಸೋಹಳಾ ನಗರ ಪ್ರದಕ್ಷಿಣೆ ಗುರುವಾರ ನಡೆಯಿತು.
ಕಳೆದ ಮೂರು ದಿನಗಳಿಂದ ಮಂದಿರದಲ್ಲಿ ದಿಂಡಿ ಉತ್ಸವದ ಅಂಗವಾಗಿ ಗ್ರಂಥಜ್ಞಾನೇಶ್ವರಿ ಪೋತಿ ಸ್ಥಾಪನೆ, ಗ್ರಂಥ ಪಾರಾಯಣ, ಸಾಮೂಹಿಕ ನಾಮಜಪ, ಪ್ರವಚನ, ಗುರು ನಿವೃತ್ತಿನಾಥ ಮಹಾರಾಜರ ಕೀರ್ತನೆ, ಸಂತ ಮಂಡಳಿಯವರಿಂದ ಸಂಗೀತ ಭಜನೆ ಕಾರ್ಯಕ್ರಮ ನಡೆದವು. ಪಂಢರಾಪೂರದ ಬೋದಲೆ ಮಹಾರಾಜರು ಉತ್ಸವದ ನೇತೃತ್ವ ವಹಿಸಿದ್ದರು. ಭಾವಸಾರ ಕ್ಷತ್ರಿಯ ಸಮಾಜದವರು ಭಾಗವಹಿಸಿದ್ದರು.