ಸವಣೂರು: ಶಿಕ್ಷಣ ಇಲಾಖೆಯ ಸಿ ಮತ್ತು ಆರ್ ನಿಯಮಗಳನ್ನು ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪಿಎಸ್‌ಟಿ ಪದವಿಧರ ಸಂಘ ಹಾಗೂ ವಿವಿಧ ಶಿಕ್ಷಕರ ಸಂಘಟನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಬಿಇಒ ಎಂ.ಎಫ್.ಬಾರ್ಕಿ ಅವರಿಗೆ ಸೋಮವಾರ ಆಕ್ಷೇಪಣೆ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಯೋಗಿ ಆಲದಕಟ್ಟಿ ಮಾತನಾಡಿ, ಶಿಕ್ಷಕರ ಸಂಘಟನೆಯ ಪ್ರಾಮಾಣಿಕ ಪ್ರಯತ್ನಕ್ಕೆ ಬೃಹತ್ ಪ್ರಮಾಣದಲ್ಲಿ ಬೆಂಬಲ ಹಾಗೂ ಸಹಕಾರ ನೀಡುತ್ತಿವೆ. ಮಾರ್ಗದರ್ಶನ, ಸಹಕಾರ ಹೀಗೆ ಇರಲಿ ಎಂದರು.
ಪಿಎಸ್‌ಟಿ ಪದವೀಧರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಟಿ. ಮಹಾಪುರುಷ ಮಾತನಾಡಿ, ‘ಸರ್ವ ಶಿಕ್ಷಕರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ಫಲ ಸಿಗಲು ಸಾಧ್ಯ. ಹಿಂದೆ ಸಿ ಮತ್ತು ಆರ್ ರೂಲ್ ತಿದ್ದುಪಡಿ ಮಾಡುವಾಗ ನಾವೆಲ್ಲರೂ ಆಕ್ಷೇಪಣೆ ಸಲ್ಲಿಸಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ, ನಕಾರಾತ್ಮಕ ವಿಚಾರ ಬಿಟ್ಟು, ಸಕಾರಾತ್ಮಕವಾಗಿ ಮುಂದೆ ಹೆಜ್ಜೆ ಇಡೋಣ’ ಎಂದು ಹೇಳಿದರು.
ಬಿಇಒ ಎಂ.ಎಫ್.ಬಾರ್ಕಿ ಆಕ್ಷೇಪಣೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ಬೇಡಿಕೆಗಳು ಆದಷ್ಟು ಬೇಗ ಈಡೇರುವಂತಾಗಲಿ. ಸಂಘದ ಆಕ್ಷೇಪಣೆಗಳನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪದಾಧಿಕಾರಿಗಳಾದ ಎನ್.ವಿ.ಕಲಕೋಟಿ, ಮಂಜುನಾಥ.ಅಕ್ಕಿ, ಅಶೋಕ ಹಾಡೋರ,ಪಿ.ಆರ್.ನವಲೆ, ಸಂಗೀತಾ ರಜಪೂತ, ಎ.ವಿ.ಬನ್ನಿಕಲ್, ಅಸದ್ವುಲ್ಲಾ, ಪದವೀಧರ ಸಂಘದ ಅಧ್ಯಕ್ಷ ಎಸ್.ಟಿ.ಮಹಾಪುರುಷ, ಪದಾಧಿಕಾರಿಗಳಾದ ವಿದ್ಯಾಧರ ಕುತನಿ, ಎಂ.ಎ. ಮುಲ್ಲಾ, ಮಂಜುನಾಥ ಕೊಟಗಿ, ಸೋಮಣ್ಣ ಅರಳಿಹಳ್ಳಿ, ಎಫ್. ಆರ್. ಹಿರೇಮಠ, ಎಸ್.ಎನ್. ಶಿಡೇನೂರ, ಎಸ್.ಬಿ.ದೊಡ್ಡಮನಿ, ಮಂಜುನಾಥ ಭಾವಿಕಟ್ಟಿ, ಪ್ರಕಾಶ ಕೆಂಚಣ್ಣನವರ, ಎನ್. ಎಸ್. ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.