ADVERTISEMENT

ಶಿರಹಟ್ಟಿ | ಅಧಿಕಾರಿಗಳ ಬೇಜವಾಬ್ದಾರಿ: ತಾ.ಪಂ ಸಾಮಾನ್ಯ ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 16:08 IST
Last Updated 8 ಜನವರಿ 2024, 16:08 IST

ಶಿರಹಟ್ಟಿ: ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಸೋಮವಾರ ನಡೆಯಬೇಕಿದ್ದ, ಸಾಮಾನ್ಯ ಸಭೆಯನ್ನು ಅಧಿಕಾರಿಗಳ ಅಪೂರ್ಣ ಮಾಹಿತಿ ಹಾಗೂ ಗೈರು ಹಾಜರಾತಿಯಿಂದ ರದ್ದುಪಡಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ನಿಂಗಪ್ಪ ಓಲೇಕಾರ ತಿಳಿಸಿದರು.

ಸಭೆ ಆರಂಭವಾಗುತ್ತಿದ್ದಂತೆಯೇ ಇಲಾಖಾವಾರು ಮಾಹಿತಿ ಪಡೆದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ‘28 ಇಲಾಖೆಗಳ ಪೈಕಿ ಕೇವಲ 16 ಇಲಾಖೆ ಅಧಿಕಾರಿಗಳು ಮಾತ್ರ ವರದಿ ನೀಡಿದ್ದು, ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದಾರೆ’ ಎಂದು ಸಭೆಯನ್ನು ರದ್ದುಗೊಳಿಸಿದರು. ಅವರ ಆದೇಶದ ಅನ್ವಯ ಸಭೆ ರದ್ದುಗೊಳಿಸಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ ಎಂದು ನಿಂಗಪ್ಪ ಓಲೇಕಾರ ಹೇಳಿದರು.

ತಾಲೂಕು ಮಟ್ಟದ ಅಧಿಕಾರಿಗಳ ಬೇಜವಾಬ್ದಾರಿತನ ಕಂಡು ಈ ಹಿಂದಿನ ಸಭೆಗಳಲ್ಲಿ ಗೈರಾಗಿದ್ದರಿಂದ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಜಿಲ್ಲಾಧಿಕಾರಿ ಕಡೆಯಿಂದ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಮುಂದಿನ ಸಭೆ ಒಳಗೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT