ADVERTISEMENT

ಲಕ್ಕುಂಡಿ | ದರ ಕುಸಿತ: ಈರುಳ್ಳಿ ಹರಗಿದ ರೈತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:47 IST
Last Updated 15 ಅಕ್ಟೋಬರ್ 2025, 5:47 IST
ಕಿತ್ತು ಹಾಕಿರುವ ಈರಳ್ಳಿಯನ್ನು ಕುರಿಗಳು ಮೇಯುತ್ತಿರುವುದು
ಕಿತ್ತು ಹಾಕಿರುವ ಈರಳ್ಳಿಯನ್ನು ಕುರಿಗಳು ಮೇಯುತ್ತಿರುವುದು   

ಲಕ್ಕುಂಡಿ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಕಂಡಿದ್ದರಿಂದ ಜಮೀನಿನಲ್ಲಿ ಕಳೆದ ಒಂದು ತಿಂಗಳಿಂದ ಕಿತ್ತು ಹಾಕಿದ್ದ ಈರುಳ್ಳಿ ಫಸಲನ್ನು ಇಲ್ಲಿಯ ರೈತರೊಬ್ಬರು ಹರಗಿದ್ದಾರೆ.

ಇಲ್ಲಿಯ ಪಾಪನಾಶಿ ರಸ್ತೆಗೆ ಹೊಂದಿರುವ ಎರಡು ಎಕರೆ ಜಮೀನಿನಲ್ಲಿ ಈರಳ್ಳಿ ಬೆಳೆದಿದ್ದ ರೈತ ಕರಿಯಪ್ಪ ತಿಮ್ಮಾಪೂರ ಅವರು ದರ ಕುಸಿತದಿಂದ ಟ್ರ್ಯಾಕ್ಟರ್‌ ಮೂಲಕ ಹರಗಿ ಜಮೀನಿನಲ್ಲಿ ಗೊಬ್ಬರವಾಗಲು ಬಿಟ್ಟಿದ್ದಾರೆ. ಇದಕ್ಕೂ ಪೂರ್ವ ಕಿತ್ತು ಹಾಕಿರುವ ಉಳ್ಳಾಗಡ್ಡಿಯನ್ನು ಕುರಿ ಮೇಯಲು ಬಿಟ್ಟಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ರೈತನ ಕಷ್ಟಕ್ಕೆ ಮರುಗಿದ್ದಾರೆ. 

‘ಉಳುಮೆ, ಬೀಜ, ಗೊಬ್ಬರ, ಔಷಧಿ, ಆಳು ಸೇರಿದಂತೆ ₹75 ಸಾವಿರ  ಖರ್ಚು ಮಾಡಿರುವ ರೈತ ದರ ಕುಸಿತದಿಂದ ಫಸಲನ್ನು ಹರಗಿದ್ದಾನೆ. ಕಾರಣ ಮಾರುಕಟ್ಟೆಯಲ್ಲಿ ಈಗ ಕ್ವಿಂಟಲ್‍ಗೆ ₹200ರಿಂದ ₹300 ಮಾತ್ರ ಇದೆ. ಕಿತ್ತು ಹಾಕಿರುವ ಈರುಳ್ಳಿಯನ್ನು ರಾಶಿ ಮಾಡಿ ಚೀಲ ತುಂಬಿ ಮಾರುಕಟ್ಟೆಗೆ ಹೋದರೆ ನಷ್ಟವೇ ಅಧಿಕವಾಗುತ್ತದೆ ಎಂಬುದನ್ನು ಅರಿತು ಜಮೀನಿನಲ್ಲಿಯೇ ಗೊಬ್ಬರವನ್ನಾಗಿ ಮಾಡಲು ಹರಗಿದ್ದೇವೆ. ಆದ್ದರಿಂದ ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಕರಿಯಪ್ಪ ತಿಮ್ಮಾಪೂರ, ಸುರೇಶ ಅಬ್ಬಿಗೇರಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.