
ಮುಂಡರಗಿ: ‘ಪುಣ್ಯ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡು ದೇವರ ದರ್ಶನ ಪಡೆಯುವ ಮೂಲಕ ದೇವರ ಕೃಪೆಗೆ ಪಾರ್ಥರಾಗಬೇಕು. ಭಗವಂತನ ನಾಮ ಸ್ಮರಣೆಯಿಂದ ದೇಹ, ಮನಸ್ಸು ಹಗುರವಾಗುತ್ತದೆ’ ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್. ರಿತ್ತಿ ಹೇಳಿದರು.
ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿಯಿಂದ ಅಂಜನಾದ್ರಿ ಆಂಜನೇಯ ದರ್ಶನಾರ್ಥ ಹಮ್ಮಿಕೊಂಡಿದ್ದ 3ನೇ ವರ್ಷದ ಪಾದಯಾತ್ರೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸಮಾಜ ಸೇವಕ ಮಂಜುನಾಥ ಇಟಗಿ, ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿ ಸಂಚಾಲಕ ದೇವಪ್ಪ ಇಟಗಿ ಮಾತನಾಡಿದರು. ಮುಖಂಡರಾದ ಯಲ್ಲಪ್ಪ ಅರ್ಕಸಾಲಿ, ಶ್ರೀನಿವಾಸ ಕಟ್ಟಿಮನಿ, ನಾಗರಾಜ ಮುರಡಿ, ಶೇಖರಗೌಡ ಪಾಟೀಲ, ಕುರುವತ್ತೆಪ್ಪ ಅರಿಷಿಣದ, ಉಮೇಶ ತೆಂಗಿನಕಾಯಿ, ಚಂದ್ರಹಾಸ ಬಂಡೆಣ್ಣವರ, ಚನ್ನಪ್ಪ ಹೂಗಾರ, ಕನಕಪ್ಪ ಕಾತರಕಿ, ಹಾಲಪ್ಪ ಜೋಳದ, ರಾಮಣ್ಣ ಉಳ್ಳಾಗಡ್ಡಿ, ಹುಚ್ಚಿರಪ್ಪ ಮನ್ನೂರ, ರಾಮಣ್ಣ ದಾಸಕನಕಪ್ಪನವರ, ರಾಮಣ್ಣ ಮಾದಣ್ಣವರ, ಪ್ರಕಾಶ ಲೇಂಡ್ವೆ, ಜಗದೀಶ ಸಾವಂತ, ರಾಜಪ್ಲ ಕುರಿ, ಮಾರುತಿ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.