ADVERTISEMENT

ಗದಗ: ಗ್ರಾಮೀಣ ಜನರಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಕ್ರಮ

ಗ್ಯಾರಂಟಿ ಯೋಜನೆ: ಗದಗ ಮತಕ್ಷೇತ್ರದಲ್ಲಿ ಶೇ 100 ಗುರಿ ಸಾಧನೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:15 IST
Last Updated 13 ಅಕ್ಟೋಬರ್ 2025, 4:15 IST
ಗದಗ ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ಅಶೋಕ ಮಂದಾಲಿ, ಕೆ.ಎಚ್‌.ಪಾಟೀಲ ಉದ್ಘಾಟಿಸಿದರು
ಗದಗ ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ಅಶೋಕ ಮಂದಾಲಿ, ಕೆ.ಎಚ್‌.ಪಾಟೀಲ ಉದ್ಘಾಟಿಸಿದರು   

ಗದಗ: ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗದಗ ಮತಕ್ಷೇತ್ರದಲ್ಲಿ ಶೇ 100ರಷ್ಟು ಗುರಿ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯ ಮಾಡಲು ಸಚಿವ ಎಚ್.ಕೆ.ಪಾಟೀಲ‌ ಅವರು ಸೂಚಿಸಿದ್ದು, ಜನರು ಸಭೆಯ ಪ್ರಯೋಜನ ಪಡೆದು ಗುರಿ ಸಾಧನೆಗೆ ಕೈಜೋಡಿಸಬೇಕು’ ಎಂದು ಗದಗ ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.

ಸಮೀಪದ ನಾಗಾವಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡಜನರ ಬದುಕು ರೂಪಿಸುವಲ್ಲಿ ಗ್ಯಾರಂಟಿ ಯೋಜನೆಗಳು ಮಹತ್ವದ್ದಾಗಿವೆ. ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಜನರಿಗೆ ತಲುಪಲು ಜನರ ಬಳಿಗೆ ಬಂದು ಸಭೆ ನಡೆಸಲಾಗುತ್ತಿದೆ ಎಂದರು.

ADVERTISEMENT

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ದಯಾನಂದ ಪವಾರ, ಸಾವಿತ್ರಿ ಹೂಗಾರ, ನಿಂಗಪ್ಪ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಳಿಯಪ್ಪ ಬಸಪ್ಪ ಸಿಗ್ಲಿ ಹಾಗೂ ಉಪಾಧ್ಯಕ್ಷೆ ಸುಮಾ ಶಿವಾನಂದ ತಳವಾರ ಸೇರಿದರೆ ಹಲವರು ಇದ್ದರು. 

ಜನರ ಬಳಿಗೆ ಸರ್ಕಾರ ಎನ್ನುವ ಕಲ್ಪನೆಯ ಮೂಲಕ ಸರ್ಕಾರದ ಹಲವು ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಹಸನಾಗಬೇಕು. ಈ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜನೋಪಕಾರಿಯಾಗಿವೆ
ಬಿ.ಆರ್.ದೇವರಡ್ಡಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ

ಸ್ವಾಭಿಮಾನದ ಬದುಕಿಗೆ ನೆರವು

‘ಬಡಜನರು ನೆಮ್ಮದಿಯಿಂದ ಬದುಕಬೇಕು. ಅವರದ್ದೂ ಸ್ವಾಭಿಮಾನದ ಜೀವನವಾಗಬೇಕು’ ಎಂದು ಗದಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕೆ.ಎಚ್.ಪಾಟೀಲ ಹೇಳಿದರು.  ಗ್ರಾಮಾಂತರ ಪ್ರದೇಶಗಳ ಜನರಿಗೆ ಗುಣಮಟ್ದ ಶಿಕ್ಷಣ ಅನ್ನ ಆರೋಗ್ಯ ಉದ್ಯೋಗ ಸೇರಿದಂತೆ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುವ ಮೂಲಕ ಗ್ರಾಮಗಳು ಆದರ್ಶವಾಗಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸದುಪಯೋಗ ಆಗಬೇಕೆನ್ನುವ ಉದ್ದೇಶದೊಂದಿಗೆ ಆಡಳಿತವನ್ನು ಜನರ ಬಳಿಗೆ ತರಲಾಗುತ್ತಿದೆ’ ಎಂದರು.