ADVERTISEMENT

ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:15 IST
Last Updated 27 ನವೆಂಬರ್ 2025, 5:15 IST
ಮುಳಗುಂದದ ಧಾನ್ಯಗಳ ವ್ಯಾಪರಸ್ಥ ಸುನೀಲ ಲಾಳಿ ಎಂಬುವರ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ಚೀಲಗಳನ್ನು ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ತಂಡದವರು ಬುಧವಾರ  ವಶಪಡಿಸಿಕೊಂಡರು
ಮುಳಗುಂದದ ಧಾನ್ಯಗಳ ವ್ಯಾಪರಸ್ಥ ಸುನೀಲ ಲಾಳಿ ಎಂಬುವರ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ಚೀಲಗಳನ್ನು ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ತಂಡದವರು ಬುಧವಾರ  ವಶಪಡಿಸಿಕೊಂಡರು   

ಮುಳಗುಂದ: ಇಲ್ಲಿನ ಬಜಾರನಲ್ಲಿರುವ ಧಾನ್ಯಗಳ ವ್ಯಾಪರಸ್ಥ ಸುನೀಲ ಬಸಪ್ಪ ಲಾಳಿ ಎಂಬುವರ ಅಂಗಡಿ ಮೇಲೆ ಮಂಗಳವಾರ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹20,362 ಮೌಲ್ಯದ 9 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಗದಗ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ಹಾಗೂ ತಂಡದವರು ದಾಳಿ ನಡೆಸಿದ್ದಾರೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗದಗ ತಾಲ್ಲೂಕು ಆಹಾರ ಇಲಾಖೆ ನಿರೀಕ್ಷಕ ಎಂ.ಎಸ್. ಹಿರೇಮಠ ಹಾಗೂ ಪೊಲೀಸ್ ಸಿಬ್ಬಂದಿ ಗಂಗಾಧರ ಕರಲಿಂಗಣ್ಣನವರ, ಗ್ರಾಮ ಲೆಕ್ಕಾಧಿಕಾರಿ ಪ್ರಿಯಾಂಕಾ ನರಗುಂದ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.