
ಗದಗ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರು ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಗಿಡ್ಡಮಲ್ಲಣ್ಣನರ ತಮ್ಮ ಸೇವಾ ಅವಧಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಮರಣ ಹೊಂದಿದ್ದು, ಇವರು ಪಂಜಾಬ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಈ ಹಿನ್ನಲೆಯಲ್ಲಿ ರಕ್ಷಕ್ ಪ್ಲಸ್ ಯೋಜನೆಯಡಿ ₹1 ಕೋಟಿಯನ್ನು ಅವರ ಕುಟುಂಬಕ್ಕೆ ಹುಬ್ಬಳ್ಳಿ ವೃತ್ತಾಧಿಕಾರಿ ಸೂರ್ಯಮಣಿ ಸಾಹು ವಿತರಿಸಿದರು.
‘ನಮ್ಮ ಯೋಧ ವೀರಮರಣ ಹೊಂದಿದ್ದು ದುಃಖದ ಸಂಗತಿ. ನಮ್ಮ ಬ್ಯಾಂಕ್ ಅವರ ಕುಟುಂಬದ ಸಹಾಯಕ್ಕೆ ಧಾವಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ತನ್ನದೇ ಆದ ಇತಿಹಾಸವಿದ್ದು, ಸದಾ ಸಮಾಜಮುಖಿ ಕಾರ್ಯದಲ್ಲಿ ತೋಡಗಿದೆ’ ಎಂದರು.
‘ಪಾಕಿಸ್ತಾನದ ಲಾಹೋರ್‌ನಲ್ಲಿ1895ರಲ್ಲಿ ಪಂಜಾಬ್ ಬ್ಯಾಂಕ್ ಸ್ಥಾಪನೆಗೊಂಡಿತು. ಇದು ದೇಶದ ಮೊದಲ ಸ್ವದೇಶಿ ಬ್ಯಾಂಕ್ ಆಗಿದೆ. ಲಾಲಾಲಜಪತ್ ರಾಯ್ ಬ್ಯಾಂಕ್‌ನ ಸಂಸ್ಥಾಪಕರಾಗಿದ್ದು, ಅವರು ಸ್ವತಃ ಯೋಧರಾಗಿದ್ದರು. 2010ರಲ್ಲಿ ದೇಶದ ತುಂಬೆಲ್ಲ ಬ್ಯಾಂಕ್ ಅನಾವರಣಗೊಂಡಿತು. ಕರ್ನಾಟಕದಲ್ಲಿ ಹುಬ್ಬಳ್ಳಿ, ಮುಧೋಳ, ಅಂಕೋಲಾದಲ್ಲಿ ಮೊದಲ ಬಾರಿಗೆ ಸ್ಥಾಪನೆಯಾಗಿತು’ ಎಂದು ವಿವರಿಸಿದರು.
‘ಮುಂದಿನ ದಿನಮಾನಗಳಲ್ಲಿ ರಾಜ್ಯದಾದ್ಯಂತ 40ರಿಂದ 45 ಶಾಖೆ ತೆರೆಯುವ ಉದ್ದೇಶ ಇದೆ’ ಎಂದರು.
ಮೃತ ಯೋಧನ ತಂದೆ, ತಾಯಿ, ಪತ್ನಿ, ಮಗು ಸೇರಿದಂತೆ ಗುರುರಾಜ್ ಬಳಗಾನೂರ, ಹಿರಿಯ ವ್ಯವಸ್ಥಾಪಕ ಶಿವಕುಮಾರ ಕೆ., ವ್ಯವಸ್ಥಾಪಕ ಡಿ.ಎಚ್.ಅಸ್ಲಂಬಾಷಾ, ಆರ್.ಜೆ. ಮೀಡಿಯಾ ಸಮೂಹ ಸಂಸ್ಥೆ ಮುಖ್ಯಸ್ಥ ರವೀಂದ್ರ ಜಲರಡ್ಡಿ, ದಿಲಾವಾರ್, ದೇವರಾಜ್, ರಮೇಶ್ ಅನಂತಪುರ, ಅಕ್ಷತಾ, ವಿಜಯಲಕ್ಷ್ಮೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.