
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಫೆ.20ರಿಂದ 22ರವರೆಗೆ ಜರುಗಲಿರುವ ಪುಲಿಗೆರೆ ಉತ್ಸವದ ಆಮಂತ್ರಣ ಪತ್ರಿಕೆಗಳನ್ನು ಶುಕ್ರವಾರ ಭಾರತೀಯ ವಿದ್ಯಾ ಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್ ಬಿಡುಗಡೆ ಮಾಡಿದರು
ಈ ಕುರಿತು ದೇವಸ್ಥಾನದಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾರತೀಯ ವಿದ್ಯಾ ಭವನದ ಜಂಟಿ ನಿರ್ದೇಶಕಿ ನಾಗಲಕ್ಷೀ ಕೆ.ರಾವ್ ಮಾಹಿತಿ ನೀಡಿದರು.
‘2016ರಲ್ಲಿ ಆರಂಭವಾದ ಉತ್ಸವ ಪ್ರತಿ ವರ್ಷ ಉದಯರಾಗ ಶೀರ್ಷಿಕೆಯೊಂದಿಗೆ ಬೆಳಗ್ಗೆ 6 ಗಂಟೆಯಿಂದ 8ರವರೆಗೆ ಹಾಗೂ ಸಂಧ್ಯಾರಾಗದ ಕಾರ್ಯಕ್ರಮಗಳು 6ರಿಂದ ರಾತ್ರಿ 9.30ರವರೆಗೆ ನಡೆಯುತ್ತವೆ. ಪ್ರಸ್ತುತ ವರ್ಷದ ಕಾರ್ಯಕ್ರಮಗಳೂ ಕೂಡ ಅದೇ ರೀತಿ ಜರುಗಲಿವೆ.
ಸಿತಾರ್ ವಾದನ, ಹಿಂದೂಸ್ತಾನಿ ಗಾಯನ, ಯಕ್ಷಗಾನ, ಭರತನಾಟ್ಯ, ಪಿಟೀಲು ವಾದನ, ಬಾನ್ಸುರಿ ವಾದನ, ಭಕ್ತಿ ಸಂಗೀತ, ಕೂಚಿಪುಡಿ ನೃತ್ಯ, ಶಾಸ್ತ್ರೀಯ ಮತ್ತು ಲಘು ಸಂಗೀತ, ಕರ್ನಾಟಕ ಸಂಗೀತ ಮತ್ತಿತರ ವೈವಿಧ್ಯ ಕಲಾಪ್ರಕಾರಗಳಲ್ಲಿ ಕಲಾವಿದರು ತಮ್ಮ ಕಲೆಯನ್ನು ಪ್ರಸ್ತುತ ಪಡಿಸಲಿದ್ದು ಈ ವರ್ಷ ಶೇ 60ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಭಾರತದ ದೈವ ಭಕ್ತಿ, ಸಾಹಿತ್ಯ, ಭವ್ಯ ಸಂಸ್ಕೃತಿ ಉಳಿಸುವ ಉದ್ಧೇಶವೇ ಉತ್ಸವದ ಗುರಿ ಆಗಿದೆ’ ಎಂದು ತಿಳಿಸಿದರು.
ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುರುರಾಜ ಕುಲಕರ್ಣಿ ಮಾತನಾಡಿ, ‘ನಮ್ಮ ನಾಡಿನ ಪರಂಪರೆ, ಸಾಹಿತ್ಯ, ಸಂಸ್ಕೃತಿ, ಚಿತ್ರಕಲೆ, ಸಂಗೀತ, ಭರತನಾಟ್ಯವನ್ನು ಉಳಿಸಿ ಬೆಳೆಸುವ ಉದ್ಧೇಶದಿಂದ ಇನ್ಪೋಸಿಸ್ ಫೌಂಡೇಷನ್‍ದವರು ಲಕ್ಷ್ಮೇಶ್ವರದಲ್ಲಿ ಪುಲಿಗೆರೆ ಉತ್ಸವ ನಡೆಸಿಕೊಂಡು ಬರುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಮೂರು ದಿನ ನಡೆಯುವ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಸುರೇಶ ರಾಚನಾಯಕರ್, ಮಾಲಾದೇವಿ ದಂದರಗಿ, ಸುಲೋಚನಾ ಜವಾಯಿ, ಬಸಣ್ಣ ಬೆಂಡಿಗೇರಿ, ಜಿ.ಎಸ್.ಗುಡಗೇರಿ, ಬಿ.ಎಸ್. ಬಾಳೇಶ್ವರಮಠ, ಪಾರ್ವತಿ ಕಳ್ಳಿಮಠ, ಎಂ.ಕೆ.ಕಳ್ಳಿಮಠ, ನೀಲಪ್ಪ ಕರ್ಜೆಕಣ್ಣವರ, ಸಿದ್ದನಗೌಡ ಬಳ್ಳೊಳ್ಳಿ, ಪ್ರವೀಣ ಬಾಳಿಕಾಯಿ, ಚನ್ನಪ್ಪ ಜಗಲಿ, ಸುಷ್ಮಾ ಚೋಟಗಲ್ಲ, ಸುಜಾತಾ ಬಾಳಿಕಾಯಿ, ಗೀತಕ್ಕ ಮಾನ್ವಿ, ಶೈಲಾ ಆದಿ, ಇಂದುಮತಿ ಜಕ್ಕನಗೌಡ್ರ ಇದ್ದರು. ಇದೇ ಸಂದರ್ಭದಲ್ಲಿ ಉತ್ಸವದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.