ADVERTISEMENT

ಪೆಟ್ಟು ತಿನ್ನುತ್ತಿದ್ದರೂ ‘ತಗ್ಗೋದೆ ಇಲ್ಲಾ’ ಅಂತ ಸಿನಿಮಾ ಡೈಲಾಗ್‌ ಹೇಳಿದ ಕಳ್ಳ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:29 IST
Last Updated 27 ಜುಲೈ 2025, 2:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini AI

ಗದಗ: ಸರ್ವಿಸ್‌ ವೈರ್‌ ಕಳ್ಳತನ ಮಾಡುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ಗದಗ ನಗರದಲ್ಲಿ ನಡೆದಿದೆ.

ADVERTISEMENT

ಆದರೆ, ಆ ಖತರ್ನಾಕ್‌ ಕಳ್ಳ ಪೆಟ್ಟು ತಿನ್ನುತ್ತಿದ್ದರೂ, ‘ತಗ್ಗೋದೋ ಇಲ್ಲಾ’ ಎಂದ ಪುಷ್ಪಾ ಸಿನಿಮಾ ಡೈಲಾಗ್‌ ಹೊಡೆದು ಸಾರ್ವಜನಿಕರನ್ನು ಇನ್ನಷ್ಟು ಕೆರಳಿಸಿದ್ದಾನೆ. ಅವನ ಸಿನಿಮಾ ಡೈಲಾಗ್‌ ಕೇಳಿದ ಜನರು ಮತ್ತಷ್ಟು ಪೆಟ್ಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಸರು ಮಹಾಂತೇಶ್‌ ಗೌಡ, ರೋಣ ತಾಲ್ಲೂಕಿನ ಒಂದು ಹಳ್ಳಿ ಎಂದು ಹೇಳಿಕೊಂಡಿರುವ ಕಳ್ಳ ಕುಂದಾಪುರಕ್ಕೆ ದುಡಿಯಲು ಹೋಗಿದ್ದನಂತೆ. ಅಲ್ಲಿ ಮಳೆ ಹೆಚ್ಚಾಗಿರುವ ಕಾರಣ ಊರಿಗೆ ಬಂದಿರುವುದಾಗಿ ಹೇಳಿಕೆ ಕೊಟ್ಟಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.