ಎಚ್.ಕೆ.ಪಾಟೀಲ
ಗದಗ: ‘ಆಮ್ ಆದ್ಮಿ ಪಕ್ಷ ಬಹಳಷ್ಟು ಜನರ ನಿರೀಕ್ಷೆಯಿಂದ ಅಧಿಕಾರಕ್ಕೇರಿತ್ತು. ಅವರು ಹಾಕಿಕೊಂಡಿದ್ದ ಕೆಲವು ನೀತಿ, ಭರವಸೆಗಳನ್ನು ನೋಡಿ ಬಹಳಷ್ಟು ಜನರು ಈ ಪಕ್ಷದತ್ತ ಆಕರ್ಷಿತರಾಗಿದ್ದರು. ಆದರೆ, ಈಗ ಬಂದಿರುವ ಜನಾದೇಶ ನೋಡಿದರೆ ಅವರು ತಮ್ಮ ನೀತಿಗಳ ಬಗ್ಗೆ ಮರುಪರಿಶೀಲನೆ ಮಾಡಬೇಕಾಗುತ್ತದೆ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗಾರರಿಗೆ ತಿಳಿಸಿದರು.
ಅಕ್ರಮ ವಲಸಿಗರ ಕೈಗೆ ಕೋಳ ತೊಡಿಸಿ ಹೊರಹಾಕುತ್ತಿರುವ ಅಮೆರಿಕದ ನೀತಿ ಬಗ್ಗೆ ಕಿಡಿಕಾರಿದ ಅವರು, ‘ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಸುಸಂಸ್ಕೃತರಾಗಿ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಅಮೆರಿಕನ್ನರದ್ದು ಸುಸಂಸ್ಕೃತ ಸಮುದಾಯ ಎನ್ನುತ್ತಾರೆ. ಆದರೆ, ಭಾರತೀಯರನ್ನು ಈ ರೀತಿ ನಡೆಸಿಕೊಂಡಿರುವುದು ಎಷ್ಟು ಸರಿ. ಅಮೆರಿಕ ಇಷ್ಟು ಎತ್ತರಕ್ಕೆ ಬೆಳೆಯುವಲ್ಲಿ ಭಾರತೀಯರ ಕೊಡುಗೆ ಅತ್ಯಮೂಲ್ಯವಾಗಿದೆ. ಅಂತಹ ಭಾರತೀಯ ಜತೆಗೆ ಟ್ರಂಪ್ ನಡೆದುಕೊಂಡ ರೀತಿ ದುರ್ದೈವದ್ದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.