ADVERTISEMENT

ಚಿಂಚಲಿ–ಕೋಳಿವಾಡ ರಸ್ತೆ ಕಾಮಗಾರಿ: ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:27 IST
Last Updated 30 ಸೆಪ್ಟೆಂಬರ್ 2025, 6:27 IST
ಮುಳಗುಂದ ಸಮೀಪದ ಚಿಂಚಲಿ ಗ್ರಾಮದಲ್ಲಿ ಚಿಂಚಲಿ-ಕೋಳಿವಾಡ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು 
ಮುಳಗುಂದ ಸಮೀಪದ ಚಿಂಚಲಿ ಗ್ರಾಮದಲ್ಲಿ ಚಿಂಚಲಿ-ಕೋಳಿವಾಡ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು    

ಮುಳಗುಂದ: ಸಮೀಪದ ಚಿಂಚಲಿ ಗ್ರಾಮದಲ್ಲಿ ಚಿಂಚಲಿ-ಕೋಳಿವಾಡ ಮಾರ್ಗ ಮಧ್ಯದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ₹2 ಕೋಟಿ ಅನುದಾನದಲ್ಲಿ ಕೋಳಿವಾಡ ರಸ್ತೆ ಮರು ಡಾಂಬರಿಕರಣ ಹಾಗೂ ಗಜೇಂದ್ರಗಡ–ಸೊರಬ ಹೆದ್ದಾರಿ ಸಿಸಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಗುಣಮಟ್ಟ ಹಾಗೂ ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ–ಬೆಟಗೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರ, ಮುಖಂಡರಾದ ಸಿದ್ದು ಪಾಟೀಲ, ಅಪ್ಪಣ ಇನಾಮತಿ, ಫಕ್ಕಿರೇಶ ಹಿರೇಮನಿ, ಎಸ್.ಎನ್. ಕತ್ತಿ, ಗಂಗಪ್ಪ ಕತ್ತಿ, ಹೇಮಣ್ಣ ಬಾಲರಡ್ಡಿ, ವಿ.ಬಿ. ಕತ್ತಿ, ವಿಜಯ ಪೂಜಾರ, ವಿನಯ್ ಬಂಗಾರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.