
ಪ್ರಜಾವಾಣಿ ವಾರ್ತೆ
ರೋಣ: ಪಟ್ಟಣದ ಗೆಳೆಯರ ಬಳಗದ ವತಿಯಿಂದ ಸವದತ್ತಿ ಯಲ್ಲಮ್ಮನಗುಡ್ಡದ ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸವದತ್ತಿ ಯಲ್ಲಮ್ಮನಗುಡ್ಡದ ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ, ಔಷಧ, ಮಾತ್ರೆ ವಿತರಣೆ, ಹಣ್ಣು, ಹಂಪಲ, ತಂಪು ಪಾನೀಯ ಸೇರಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಶಿವಪೇಟೆ ಬಡಾವಣೆಯ ಗೆಳೆಯರ ಬಳಗದ ವತಿಯಿಂದ ಇದು ಎರಡನೇಯ ವರ್ಷದ ದಾಸೋಹ ಕಾರ್ಯಕ್ರಮವಾಗಿದೆ.
ದಾಸೋಹ ಸೇವೆಯಲ್ಲಿ ರಾಜೇಶ ಕುಲಕರ್ಣಿ, ಅಶೋಕ ಕೋಳಿವಾಡ, ಶರಣಪ್ಪ ಡಂಬಳ,ಸುರೇಶ್ ಅಂಗಡಿ, ಪ್ರಭುರಾಜ ಮಾರನಬಸರಿ, ಈರಣ್ಣ ಗದಗಿನ, ರವಿ ಕೊಪ್ಪದ, ರಮೇಶ ಗೌಡಪ್ಪಗೌಡ್ರ, ರೋಹಿತ್ ಕುಂಬಾರ, ಮಾಗುಂಡಪ್ಪ ಕರ್ಪೂರಮಠ, ಶಶಿಧರ ಪಾಟೀಲ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.