ADVERTISEMENT

ಲಕ್ಷ್ಮೇಶ್ವರ: ‘ಸಮಾಜಕ್ಕೆ ಶಂಕರರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 14 ಮೇ 2025, 13:32 IST
Last Updated 14 ಮೇ 2025, 13:32 IST
ಲಕ್ಷ್ಮೇಶ್ವರ ಶಂಕರಭಾರತಿ ಮಠದಲ್ಲಿ ವಿಪ್ರ ಸಮಾಜದಿಂದ ಶಂಕರಾಚಾರ್ಯರ ಜಯಂತಿ ಅಂಗವಾಗಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು
ಲಕ್ಷ್ಮೇಶ್ವರ ಶಂಕರಭಾರತಿ ಮಠದಲ್ಲಿ ವಿಪ್ರ ಸಮಾಜದಿಂದ ಶಂಕರಾಚಾರ್ಯರ ಜಯಂತಿ ಅಂಗವಾಗಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು   

ಲಕ್ಷ್ಮೇಶ್ವರ: ‘ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ದೊಡ್ಡದು. ಅಂದಿನ ದಿನಗಳಲ್ಲಿಯೇ ಹಿಂದೂ ಸಮಾಜ ಸಂಘಟನೆಗೆ ಅವರು ಒತ್ತು ನೀಡಿದ್ದರು. ಅವರ ಜಯಂತಿ ಆಚರಣೆ ನಾಡಿನೆಲ್ಲೆಡೆ ಅದ್ದೂರಿಯಾಗಿ ಆಚರಿಸಬೇಕು’ ಎಂದು ಪಟ್ಟಣದ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಹೇಳಿದರು.

ಇಲ್ಲಿನ ಶಂಕರಭಾರತಿ ಮಠದಲ್ಲಿ ಸೋಮವಾರ ವಿಪ್ರ ಸಮಾಜದವರು ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಹಾಗೂ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಮಾಜದ ಹಿರಿಯರಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶಂಕರಾಚಾರ್ಯರು ಪ್ರತಿಪಾದಿಸಿದ್ದ ಸಿದ್ಧಾಂತ ಮನುಕುಲದ ಒಳಿತಿನ ಆಶಯ, ಜಗತ್ತಿನ ಶಾಂತಿ, ಸೌಹಾರ್ಧತೆಗೆ ಧಾರ್ಮಿಕ ಚಿಂತನೆಗಳ ಅಡಿಪಾಯ ಹಾಕಿದ್ದರು. ಬ್ರಾಹ್ಮಣ ಸಮಾಜದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸಮಾಜದ ಸಂಘಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು’ ಎಂದರು.

ADVERTISEMENT

ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ‘ದೇಶದ ಧಾರ್ಮಿಕ ಪರಂಪರೆ, ಸಂಸ್ಕೃತಿ ಉನ್ನತಿಗೆ ಶಂಕರಾಚಾರ್ಯರರ ಕೊಡುಗೆ ಅಪಾರ. ತಮ್ಮ ಜೀವಿತಾವಧಿಯ ಅಲ್ಪ ಅವಧಿಯಲ್ಲೇ ಅಗಾಧವಾದ ಪಾಂಡಿತ್ಯವನ್ನು ಬೆಳೆಸಿಕೊಂಡು ಇಡೀ ವಿಶ್ವದಲ್ಲೇ ಅಪ್ರತಿಮವಾದ ಸಾಧನೆ ಮಾಡಿದ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿವರು ಶಂಕರಾಚಾರ್ಯರು.

‘ಶಂಕರರು ಒಂದು ವರ್ಗಕ್ಕೆ ಪಂಗಡಕ್ಕೆ ಸೀಮಿತವಾಗದೇ  ಅಖಂಡ ಹಿಂದೂ ಸಮಾಜಕ್ಕೆ ಸೇರಿದವರಾಗಿದ್ದರು. ಬ್ರಾಹ್ಮಣ ಸಮಾಜದ ಮಕ್ಕಳು ರಾಜ್ಯಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಸಮಾಜದ ಹಿರಿಯರು ಸಂಘಟನೆಗೆ ಮಹತ್ವ ನೀಡಬೇಕು’ ಎಂದರು.

ನಾರಾಯಣಭಟ್ ಪುರಾಣಿಕ, ಕೆ.ಎಸ್.ಕುಲಕರ್ಣಿ, ಗುರುರಾಜ ಪಾಟೀಲಕುಲಕರ್ಣಿ, ಶಂಕರ ಬೆಟಗೇರಿ, ಧೃವ ಬೆಟಗೇರಿ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ಪ್ರಸನ್ನ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.