ADVERTISEMENT

ಭಾವೈಕ್ಯ ಜಗತ್ತಿಗೆ ಹಬ್ಬಲಿ: ಫಕೀರ ಸಿದ್ಧರಾಮ ಶ್ರೀ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:11 IST
Last Updated 26 ಜುಲೈ 2025, 5:11 IST
ಶಿರಹಟ್ಟಿಯ ಜ. ಫಕೀರೇಶ್ವರ ಮಠಕ್ಕೆ ಭೇಟಿ ನೀಡಿದ ಬಂದೇ ನವಾಜ್ ದರ್ಗಾದ ಗುರುಗಳು ಹಾಗೂ ವಿದಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾಗೂ ಇತರರನ್ನು ಫಕೀರ ಸಿದ್ದರಾಮ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಶಿರಹಟ್ಟಿಯ ಜ. ಫಕೀರೇಶ್ವರ ಮಠಕ್ಕೆ ಭೇಟಿ ನೀಡಿದ ಬಂದೇ ನವಾಜ್ ದರ್ಗಾದ ಗುರುಗಳು ಹಾಗೂ ವಿದಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾಗೂ ಇತರರನ್ನು ಫಕೀರ ಸಿದ್ದರಾಮ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.   

ಶಿರಹಟ್ಟಿ: ‘ನಾವೆಲ್ಲಾ ಒಂದು ನಾವೆಲ್ಲಾ ಬಂಧು ಎಂದು ಭಾವೈಕ್ಯತೆಯಿಂದ ಬಾಳಿದರೆ ಭೂ ಲೋಕ‌ ಸ್ವರ್ಗವಾಗುತ್ತದೆ ಎಂಬುದನ್ನು ಅರಿವು ಮೂಡಿಸಿದ ಸಂತ’ ಎಂದು ಸ್ಥಳೀಯ ಜ. ಫಕೀರೇಶ್ವರ ಮಠದ 13ನೇ ಪೀಠಾಧಿಪತಿ ಫಕಿರ ಸಿದ್ಧರಾಮ ಶ್ರೀಗಳು ಹೇಳಿದರು.

ಶನಿವಾರ ಹುಬ್ಬಳ್ಳಿಯಲ್ಲಿ ಜರುಗಲಿರುವ ಸೂಫಿ ಸಂತರ ಸಮಾವೇಶದ ಹಿನ್ನೆಲೆಯಲ್ಲಿ ಗುಲ್ಬರ್ಗಾದ ಖ್ವಾಜಾ ಬಂದೇನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್- ಹುಸೈನಿ ಸಜ್ಜಾದಾ ನಶೀನ್ ಮತ್ತು ಮುತವಲ್ಲಿ ಹಾಗೂ ಸರ್ಕಾರದ ಮುಖ್ಯ ಸಚೇತಕರು, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ ಅವರು ಶ್ರೀಮಠಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ ಆಶಿರ್ವಚನ ನೀಡಿದರು.

‘ಸಾವಳಗಿ ಶಿವಲಿಂಗೇಶ್ವರರು, ಶಿಶುನಾಳದ ಶರೀಫರು, ಶಿರಹಟ್ಟಿ ಫಕೀರೇಶ್ವರರು, ಬಿಜಾಪೂರ ದರ್ಗಾದ ಖ್ವಾಜಾ ಅಮೀನರು, ಗುಲ್ಬರ್ಗಾದ ಬಂದೇನವಾಜ್, ಅಜ್ಮೀರದ ಪೀರಾಗಳೆಲ್ಲರೂ ಜಾತಿ ಹೇಳುವವರಲ್ಲ. ಪ್ರೀತಿಯಿಂದ ಇರಿ ಅನ್ನೋದನ್ನ ಜಗತ್ತಿಗೆ ಸಾರಿದವರು’ ಎಂದು ತಿಳಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಮಾತನಾಡಿ, ಶಿರಹಟ್ಟಿಯ ಫಕೀರೇಶ್ವರ ಮಠವು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ಭಾವೈಕ್ಯದ ಸಂಕೇತವಾಗಿ ಬೆಳೆದು ನಾಡಿಗೆ ಮಹತ್ತರವಾದ ಸಂದೇಶ ನೀಡುತ್ತಾ ಬಂದಿದೆ. ಇದು ಹಿಂದೂ ಮುಸ್ಮಿಂ ಭಾವೈಕ್ಯದ ಮಠವಾಗಿದ್ದು, ದೇಶದಲ್ಲಿ ಭಾವೈಕ್ಯ, ಕೋಮು ಸೌಹಾರ್ಮ ಸಾಮರಸ್ಯ ನೀಡುವ ಮಠವಾಗಿದೆ ಎಂದು ತಿಳಿಸಿದರು.

ಗುಲ್ಬರ್ಗಾದ ಖ್ವಾಜಾ ಬಂದೇನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್- ಹುಸೈನಿ ಸಜ್ಜಾದಾ ನಶೀನ್ ಮತ್ತು ಮುತವಲ್ಲಿ ಮಾತನಾಡಿ, ಇಡೀ ಹಿಂದೂಸ್ಥಾನದಲ್ಲಿಯೇ ಹೆಸರಾದ ಮಠವಾಗಿದ್ದು, ಈ ಮಠಕ್ಕೆ ಗುಲ್ಬರ್ಗಾದ ದರ್ಗಾಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿ ನಡೆಯುವ ಎಲ್ಲ ಸಂಪ್ರದಾಯಗಳು ಮುಸ್ಲಿಂ ಸಂಪ್ರದಾಯವಾಗಿವೆ. ಏಷ್ಯಾ ಖಂಡದಲ್ಲಿಯೇ ಖ್ವಾಜಾ ಬಂದೇನವಾಜ ದರ್ಗಾ ಹೆಸರು ಪಡೆದಿದೆ. ಈ ನಾಡಿನ ಎಲ್ಲ ಸೂಫೀ ಸಂತರು ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ. ಎಲ್ಲರೂ ಸಹೋದರರಂತೆ ಬಾಳಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಅದರಂತೆ ಶ್ರೀ ಮಠವೂ ಕೂಡ ಭಾವೈಕ್ಯದ ಸಂದೇಶ ಸಾರುತ್ತಾ ಸಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹುಮಾಯೂನ್ ಮಾಗಡಿ, ಹಮೀದ ಸನದಿ, ಚಾಂದಸಾಬ ಮುಳಗುಂದ, ಡಿ.ಕೆ. ಹೊನ್ನಪ್ಪನವರ, ಮುತ್ತು ಭಾವಿಮನಿ, ಅಜ್ಜು ಪಾಟೀಲ, ಎಂ.ಕೆ. ಲಮಾಣಿ, ಹೊನ್ನಪ್ಪ ಶಿರಹಟ್ಟಿ, ಬುಡನಶ್ಯಾ ಮಕಾನದಾರ, ಮಾಬೂಸಾಬ ಲಕ್ಷೆö್ಮÃಶ್ವರ, ಮಂಜುನಾಥ ಘಂಟಿ, ಹಸರತ ಢಾಲಾಯತ, ಅನೀಲ ಪಾಟೀಲ, ಹೈದರ್ ಭಾಷಾ, ದಾದಾಫೀರ ಮುಚ್ಚಾಲೆ ಇತರರು ಇದ್ದರು.

ದ್ವೇಷ ಬಿಡು ಪ್ರೀತಿ ಮಾಡು ಎಂಬ ನಾಣ್ನುಡಿಯನ್ನು ಜಗಕ್ಕೆ ಸಾರಿದ ಕರ್ತೃ ಜ.ಫಕೀರೇಶ್ವರರು ಪರಸ್ಪರ ಪ್ರೀತಿಯಿಂದ ಸಹೋದರರಂತೆ ಬಾಳಬೇಕೆಂದವರು
ಫಕೀರ ಸಿದ್ಧರಾಮ ಸ್ವಾಮೀಜಿ, ಜ.ಫಕೀರೇಶ್ವರಮಠ
ಭಾವೈಕ್ಯದ ಮಠ
ಹಿಂದೂ-ಮುಸ್ಲಿಂ ಭಾವೈಕ್ಯದ ಮಠವಾದ ಫಕೀರೇಶ್ವರರ ಮಠಕ್ಕೆ ಶಾಖಾ ಮಠಗಳು ಶಾಖಾ ಮಸೀದಿಗಳು ಇವೆ. ಸ್ಥಳೀಯ ಮಸೀದಿಯಲ್ಲಿ ಮೊಹರಂ ಹಬ್ಬವನ್ನು ಫಕೀರೇಶ್ವರ ಮಠದ ವತಿಯಿಂದ ನಡೆಸುತ್ತಿದೆ. ಪಾಂಜಾಗಳಿಗೆ ಹಿಂದೂ ಸಂಪ್ರದಾಯದಂತೆ ವಿಭೂತಿ ಹಚ್ಚಲಾಗುತ್ತದೆ ಎಂದು ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು. ಅಲ್ಲದೇ ಇದರ ಪೂಜೆ ಮಾಡುವವರು ಮುಸ್ಲಿಮರು. ದಸರಾ ಹಬ್ಬದಲ್ಲಿ ಬನ್ನಿ ಮುಡಿಯುವ ಕಾರ್ಯವನ್ನು ದರ್ಗಾದಿಂದಲೇ ಪ್ರಾರಂಭಿಸಲಾಗುತ್ತದೆ. ಇದು ಭಾವೈಕ್ಯದ ಸಂಕೇತವಾಗಿದೆ. ಫಕೀರೇಶ್ವರರ ಸಾಮರಸ್ಯದ ದ್ಯೋತಕವಾಗಿ ವೇಷಭೂಷಣದಲ್ಲೂ ನೋಡುವುದಾದರೆ ತಲೆಯ ಮೇಲೆ ಕೇಸರಿ ಪಠಗಾ ಕೊರಳಲ್ಲಿ ಹಸಿರು ಶಲ್ಯ ಜತೆಗೆ ಬಿಳಿ ಬಟ್ಟೆ ಕಾಣುತ್ತಿದ್ದು ಈ ಮೂರು ಬಣ್ಣ ಭಾರತ ದೇಶದ ಧ್ವಜದಲ್ಲಿ ಕಾಣಬಹುದಾಗಿದ್ದು ಕರ್ತೃ ಫಕೀರೇಶ್ವರರು ಇದರ ರೂವಾರಿಗಳಾಗಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.