ADVERTISEMENT

ಶಿರಹಟ್ಟಿ: ಫಕೀರೇಶ್ವರ ಮಠಕ್ಕೆ ಸಚಿವ ಶ್ರೀರಾಮುಲು ಭೇಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 16:17 IST
Last Updated 13 ಮಾರ್ಚ್ 2022, 16:17 IST
ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಸಚಿವ ಶ್ರೀರಾಮುಲು ಹಾಗೂ ವಿ.ಪ.ಸದಸ್ಯ ಎಸ್.ವಿ.ಸಂಕನೂರ ಭೇಟಿ ನೀಡಿ ಫಕೀರ ದಿಂಗಾಲೇಶ್ವರ ಶ್ರೀಗಳಿಂದ ಆಶೀರ್ವಾದ ಪಡೆದರು.
ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಸಚಿವ ಶ್ರೀರಾಮುಲು ಹಾಗೂ ವಿ.ಪ.ಸದಸ್ಯ ಎಸ್.ವಿ.ಸಂಕನೂರ ಭೇಟಿ ನೀಡಿ ಫಕೀರ ದಿಂಗಾಲೇಶ್ವರ ಶ್ರೀಗಳಿಂದ ಆಶೀರ್ವಾದ ಪಡೆದರು.   

ಶಿರಹಟ್ಟಿ: ಸ್ಥಳೀಯ ಜ.ಫಕೀರೇಶ್ವರ ಸಂಸ್ಥಾನ ಮಠಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಹಾಗೂ ವಿ.ಪ.ಸದಸ್ಯ ಎಸ್.ವಿ.ಸಂಕನೂರ ಭೇಟಿ ನೀಡಿ ಫಕೀರ ದಿಂಗಾಲೇಶ್ವರ ಶ್ರೀಗಳನ್ನು ಸತ್ಕರಿಸಿ ಅವರಿಂದ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಫಕೀರೇಶ್ವರ ಮಠವು ಜಾತಿ ವ್ಯವಸ್ಥೆಯಿಂದ ದೂರವಿದ್ದು, ಭಾವೈಕ್ಯತೆಯಿಂದ ಭಾತೃತ್ವವನ್ನು ಎತ್ತಿ ಹಿಡಿಯುತ್ತಿರುವ ಪ್ರಸ್ತುತ ಮಠ ರಾಜ್ಯ ಹಾಗೂ ದೇಶಕ್ಕೆ ಮಾದರಿ. ಫಕೀರ ದಿಂಗಾಲೇಶ್ವರ ಶ್ರೀಗಳು ಪ್ರಸ್ತುತ ಮಠದ ಉತ್ತರಾಧಿಕಾರಿಯಾಗಲು ಯೋಗ್ಯರಿದ್ದು, ಫಕೀರ ಸಿದ್ದರಾಮ ಶ್ರೀಗಳ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಲಿದ್ದಾರೆ ಎಂದು ಹೇಳಿದರು.

ಫಕೀರ ದಿಂಗಾಲೇಶ್ವರಶ್ರೀ ಮಾತನಾಡಿ, ರಾಮುಲು ಅವರ ಜನಪರ ಕಾಳಜಿ ಜಿಲ್ಲೆಯ ಜನತೆಯಲ್ಲಿ ಹಾಸು ಹೊಕ್ಕಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯವರಾದವರು ಗದಗ ಜಿಲ್ಲೆಯಲ್ಲಿ ಸಾವಿರಾರು ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸಿದ ರಾಜಕೀಯ ನೇತಾರ. ವಿಧಾನ ಪರಿಷತ್ ಸದಸ್ಯ ಸಂಕನೂರ ಅವರು ಸಹ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಈರ್ವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.

ADVERTISEMENT

ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ, ವಿ.ಎಸ್.ಪಾಟೀಲ, ಬಸವರಾಜ ಕೆಲಗಾರ, ಅಶೋಕ ಮಳಗಿ, ಕಾಂತಿಲಾಲ ಬನ್ಸಾಲಿ, ಹುಮಾಯೂನ್‌ ಮಾಗಡಿ, ವೈ.ಎಸ್.ಪಾಟೀಲ, ಸಿ.ಸಿ.ನೂರಶೆಟ್ಟರ, ಬಿಜೆಪಿ ತಾಲೂಕಾಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.