ADVERTISEMENT

ಕಾರ್ತಿಕ ದಾನಿಗೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:14 IST
Last Updated 17 ಮಾರ್ಚ್ 2021, 5:14 IST
ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಪುರಸ್ಕೃತರಾದ ಕಾರ್ತಿಕ ಮೋಹನಲಾಲ್ ದಾನಿ ಮತ್ತು ಮಾರ್ಗದರ್ಶಿ ಉಪನ್ಯಾಸಕ ಜೆ.ಎಂ.ಮಠಪತಿ ಅವರನ್ನು ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣವರು ಮತ್ತು ಸಿಬ್ಬಂದಿ ಅಭಿನಂದಿಸಿದರು.
ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಪುರಸ್ಕೃತರಾದ ಕಾರ್ತಿಕ ಮೋಹನಲಾಲ್ ದಾನಿ ಮತ್ತು ಮಾರ್ಗದರ್ಶಿ ಉಪನ್ಯಾಸಕ ಜೆ.ಎಂ.ಮಠಪತಿ ಅವರನ್ನು ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣವರು ಮತ್ತು ಸಿಬ್ಬಂದಿ ಅಭಿನಂದಿಸಿದರು.   

ಗದಗ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ವತಿಯಿಂದ ಮಾರ್ಚ್‌ 13 ಮತ್ತು 14ರಂದು ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಪುರಸ್ಕೃತರಾದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕಾರ್ತಿಕ ಮೋಹನಲಾಲ್ ದಾನಿ ಮತ್ತು ಮಾರ್ಗದರ್ಶಿ ಉಪನ್ಯಾಸಕ ಜೆ.ಎಂ.ಮಠಪತಿ ಅವರನ್ನು ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣವರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದರು.

‘ಲಭ್ಯ ಪರಿಕರಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿ ಸಂಶೋಧಿಸಿದ ಸ್ಮಾರ್ಟ್ ಬ್ಲೈಂಡ್ ಸ್ಟಿಕ್ ಅಂಧರ ಬಾಳಿನ ಬೆಳಕಾಗುವುದರಲ್ಲಿ ಸಂಶಯವಿಲ್ಲ’ ಎಂದು ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣ ಅಭಿಪ್ರಾಯಪಟ್ಟರು.

ಸಂಶೋಧನೆಗೆ ಪೇಟೆಂಟ್ ಪಡೆಯಬೇಕೆಂಬ ವಿದ್ಯಾರ್ಥಿಯ ಹಂಬಲವನ್ನು ಕಾಲೇಜಿನ ವತಿಯಿಂದ ಪ್ರೋತ್ಸಾಹಿಸುವುದಾಗಿ ತಿಳಿಸಿದರು.

ADVERTISEMENT

ಅಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಗದಗ ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಎಸ್.ರಾಜೂರ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕೆ. ಎಚ್. ಬೇಲೂರ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.