ADVERTISEMENT

ಶಿಕ್ಷಕರ ದಿನಾಚರಣೆ | ಗುರುವಿಗೆ ಜಗತ್ತನ್ನು ಬದಲಿಸುವ ಶಕ್ತಿ ಇದೆ: ಶೈಲಜಾ ವಿ.ಜೋಶಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:29 IST
Last Updated 7 ಸೆಪ್ಟೆಂಬರ್ 2025, 2:29 IST
ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು
ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು   

ಗದಗ: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತನ್ನೇ ಬದಲಾವಣೆ ಮಾಡಬಹುದು. ರಾಧಾಕೃಷ್ಣನ್ ಅವರು ತತ್ವಜ್ಞಾನಿ, ಉತ್ತಮ ಶಿಕ್ಷಕರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನಿವೃತ್ತ ಶಿಕ್ಷಕಿ ಶೈಲಜಾ ವಿ.ಜೋಶಿ ಹೇಳಿದರು.

ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿರುವ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಗುರುವಿನ ಮೇಲೆ ಗುರುತರ ಜವಾಬ್ದಾರಿ ಇರುತ್ತದೆ. ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವ ಶಕ್ತಿ ಗುರುವಿಗಿದೆ’ ಎಂದರು.

ADVERTISEMENT

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ರುಕ್ಮಿಣಿ ಹಂಚಿನಾಳ, ಸುಲೇಮಾನ್ ನಡಿವಿನಮನಿ ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಅನಿಸಿಕೆ ಹಂಚಿಕೊಂಡರು. ಬಳಿಕ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಾಲಾ ಶೈಕ್ಷಣಿಕ ಮಂಡಳಿಯ ಉಪಾಧ್ಯಕ್ಷ ಡಿ.ಬಿ.ಓದುಗೌಡರ, ಪ್ರಾಚಾರ್ಯ ವಿ.ಎ.ರಾಯಭಟ್ಟನವರ, ವೈ.ಆರ್.ಶೆಟ್ಟಿ ವೇದಿಕೆಯಲ್ಲಿದ್ದರು.

ಕಚೇರಿ ವ್ಯವಸ್ಥಾಪಕ ಚಂದ್ರಗೌಡ ಬಿ.ಪಾಟೀಲ, ಶಿಕ್ಷಕರಾದ ಸಿ.ಬಿ.ಹೊಳೆಯಣ್ಣವರ, ಪ್ರಕಾಶ ಸರಮೊಕದಮ್ ಉಪಸ್ಥಿತರಿದ್ದರು.

ಶಿಕ್ಷಕಿ ಸುಜಾತಾ ಹಿರೇಗೌಡರ ಸ್ವಾಗತಿಸಿದರು. ಸರಿತಾ ಹೂಲಿಹಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಚೆನಮ್ ಮಾದಪ್ಪ ಹಾಗೂ ಸ್ವಪ್ನಾ ಸಂಗಮ ನಿರೂಪಿಸಿದರು. ವಾರಿಜಾ ಬಿ.ಎಚ್. ವಂದಿಸಿದರು.

ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕ ವೃತ್ತಿ ಶ್ರೇಷ್ಠ ಹಾಗೂ ಗೌರವದ ಹುದ್ದೆಯಾಗಿದೆ. ಶಿಕ್ಷಕರಾಗುವುದು ಪುಣ್ಯದ ಕೆಲಸ. ಇದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ವೃತ್ತಿ.
– ಅನಿಲ ವೈದ್ಯ, ಶಾಲೆಯ ಶೈಕ್ಷಣಿಕ ಸಮಿತಿ ಚೇರ್‌ಮನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.