ಗದಗ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೂಳಿಯನ್ನು ಉಪಚರಿಸಿ ಪ್ರವಾಸಿ ಮಿತ್ರ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಗೂಳಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ತ್ರಿಕೂಟೇಶ್ವರ ದೇವಸ್ಥಾನದ ಒಳಕ್ಕೆ ನುಗ್ಗಿತ್ತು. ರಕ್ತಸ್ರಾವದಿಂದ ಅರೆ ಜೀವವಾಗಿ ಬಳಲುತ್ತಿತ್ತು. ಈ ವೇಳೆ ದೇವಸ್ಥಾನಕ್ಕೆ ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಮಾಹಿತಿ ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸರಿತಾ ಎಲ್.ಬುಟ್ಟಿ ಕೊರವರ ಮತ್ತು ಕನಕರಾಜ ಹು. ಮೂಲಿಮನಿ ಅವರು ಮೂಖಪ್ರಾಣಿಯ ರೋಧನೆ ಕಂಡು ಕೂಡಲೇ ಪಶು ಸಂರಕ್ಷಣಾ ಸಹಾಯವಾಣಿಗೆ ಕರೆ ಮಾಡಿ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದರು.
ಮಾಹಿತಿ ಪಡೆದ ಪಶು ವೈದ್ಯಾಧಿಕಾರಿಗಳು ತಂಡದ ಜತೆಗೆ ಕೆಲವೇ ನಿಮಿಷಗಳಲ್ಲಿ ದೇವಸ್ಥಾನಕ್ಕೆ ಬಂದು ತೀವ್ರವಾಗಿ ಗಾಯಗೊಂಡ ಗೂಳಿಗೆ ಒಂದು ಗಂಟೆಗೂ ಅಧಿಕ ಕಾಲ ಚಿಕಿತ್ಸೆ ನಡೆಸಿದರು.
ಇಲ್ಲಿರುವ ಪ್ರವಾಸಿ ಮಿತ್ರ ಸಿಬ್ಬಂದಿಯವರ ಸಮಯ ಪ್ರಜ್ಞೆಯಿಂದ ಸಿಕ್ಕ ಮಾಹಿತಿ ಮೇರೆಗೆ ಒಂದು ಜೀವ ಉಳಿಸಲಾಯಿತು ಎಂದು ಪಶು ವೈದ್ಯಾಧಿಕಾರಿಗಳು ಅವರನ್ನು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.