ADVERTISEMENT

ಪಟ್ಚಣ ಪಂಚಾಯಿತಿ ಉಪ ಚುನಾವಣೆ: ಕಾಂಗ್ರೆಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 2:33 IST
Last Updated 7 ಸೆಪ್ಟೆಂಬರ್ 2021, 2:33 IST
ಮುಳಗುಂದ ಪಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೊನ್ನಪ್ಪಹಳ್ಳಿ ಗೆಲವು ಸಾಧಿಸಿದ ಹಿನ್ನೆಲೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು  
ಮುಳಗುಂದ ಪಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೊನ್ನಪ್ಪಹಳ್ಳಿ ಗೆಲವು ಸಾಧಿಸಿದ ಹಿನ್ನೆಲೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು     

ಮುಳಗುಂದ: ಪಟ್ಟಣ ಪಂಚಾಯ್ತಿ ವಾರ್ಡ್‌ ಸಂಖ್ಯೆ18ರ ಉಪ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೊನ್ನಪ್ಪ ಹಳ್ಳಿ 414 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಸೆ.3ರಂದು ನಡೆದ ಪಟ್ಟಣ ಪಂಚಾಯ್ತಿ ಉಪ ಚುನಾವಣೆಯಲ್ಲಿ 772 ಮಂದಿ ಮತ ಚಲಾಯಿಸಿದ್ದರು.ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಹೊನ್ನಪ್ಪ ಹಳ್ಳಿ 589, ಬಿಜೆಪಿ ಅಭ್ಯರ್ಥಿ ಸಿದ್ದಪ್ಪ ವಡ್ಡರ 175 ಮತ ಪಡೆದಿದ್ದು, 8 ನೋಟಾ ಮತ ಚಲಾವಣೆ ಆಗಿವೆ.

ಕಾಂಗ್ರೆಸ್ ವಿಜಯೋತ್ಸವ: ಪಟ್ಟಣ ಪಂಚಾಯ್ತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೊನ್ನಪ್ಪ ಹಳ್ಳಿ ಗೆಲವು ಸಾಧಿಸಿದ ಕಾರಣದ ಪಟ್ಟಣದ ಗಾಂಧಿಕಟ್ಟೆ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ, ಮುಖಂಡರಾದ ಎಸ್.ಎಂ.ನೀಲಗುಂದ, ಎಂ.ಡಿ.ಬಟ್ಟೂರ, ಬಿ.ಎಂ.ವಾಲಿ, ಕೆ.ಎಲ್.ಕರಿಗೌಡ್ರ, ವಿಜಯ ನೀಲಗುಂದ, ಎನ್.ಆರ್.ದೇಶಪಾಂಡೆ, ಅಶೋಕ ಹುಣಸಿಮರದ, ಖಾನಸಾಬ ಲಾಡಮ್ಮನವರ, ಎ.ಡಿ.ಮುಜಾವರ, ಎಸ್.ಸಿ.ಬಡ್ನಿ, ಹೊನ್ನಪ್ಪ ಜೋಗಿ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.