ADVERTISEMENT

ರೋಣ | ವಿಷ್ಣುವರ್ಧನ್ ಪುಣ್ಯ ಸ್ಮರಣೆ: ಅಭಿಮಾನಿಗಳಿಂದ ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 5:13 IST
Last Updated 31 ಡಿಸೆಂಬರ್ 2025, 5:13 IST
ಸವಡಿ ಗ್ರಾಮದಲ್ಲಿ ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಸವಡಿ ಗ್ರಾಮದಲ್ಲಿ ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ರೋಣ: ಚಲನಚಿತ್ರ ನಟ ದಿ.ವಿಷ್ಣುವರ್ಧನ್ ಅವರ 16ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮಂಗಳವಾರ ತಾಲ್ಲೂಕಿನ ಸವಡಿ ಗ್ರಾಮದಲ್ಲಿ ವಿಷ್ಣು ಸೇನಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ಜರುಗಿತು.

ಗ್ರಾಮದ ಬೂದಗೆರೆ ಪಕ್ಕದ ಬಸ್ ನಿಲ್ದಾಣದ ಸಮೀಪ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅಭಿಮಾನಿಗಳು ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಅಲ್ಲಾಸಾಬ್ ಸೋಟಕನಾಳ,ರಜಬ್ ಅಲಿ ಮೇಲಿನಮನಿ, ಕುಬೇರಪ್ಪ ಪರಡ್ಡಿ, ವಿರೂಪಾಕ್ಷಪ್ಪ ಜೋಗರಡ್ಡಿ, ರಾಮನಗೌಡ ಅರಹುಣಸಿ, ಬುಡ್ನೆಸಾಬ್ ಮೇಲಿನಮನಿ, ಪ್ರಭಯ್ಯ ಶಿವಪೂಜಿ, ನಿಂಗಪ್ಪ ಅಸೂಟಿ, ಸುಲೇಮಾನ್ ನದಾಫ, ವೀರಯ್ಯ ಗಣಾಚಾರಿ, ದಾವಲಸಾಬ್ ತರಫದಾರ, ನಾಗರಾಜ ಹೊಸಮನಿ, ಅಲ್ತಾಫಾ ನದಾಫ, ಮಂಜುನಾಥ ಲಕ್ಕಣ್ಣವರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.