
ನರಗುಂದ: ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮತ್ತು ವಿಧಾನಸಭೆ ಚುನಾವಣೆ ಯಾವುದೇ ಕ್ಷಣದಲ್ಲೂ ಬರಬಹುದು. ಮತದಾರರ ಪಟ್ಟಿಯ ಪರಿಷ್ಕರಣೆ ಬಹಳ ಮಹತ್ವ ಪಡೆದಿದೆ. ಬಿಜೆಪಿ ಕಾರ್ಯಕರ್ತರು ಜಾಗೃತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸಲಹೆ ನೀಡಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ನರಗುಂದ, ಹೊಳೆಆಲೂರ ಮತ್ತು ಲಕ್ಕುಂಡಿ ಮಂಡಲಗಳ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಬಿಎಲ್ಎ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಸೇರ್ಪಡೆ ಆಗಿರುತ್ತವೆ. ರಾಜ್ಯ ಕಾಂಗ್ರಸ್ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆದಿದೆ. ಸಧ್ಯ ವಿಧಾನಸಭೆ ಚುನಾವಣೆ ಬರುವ ಸಂಭವವಿದ್ದು, ಕಾಂಗ್ರೇಸ್ ಪಕ್ಷದ 75 ಶಾಸಕರು ಬಿಜೆಪಿ ಸೇರಲಿದ್ದಾರೆ’ ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶದಂತೆ ಮತದಾರರ ಪಟ್ಟಿ ಪರಿಷ್ಕರಣೆ ಏ.1 ರಿಂದ ತ್ವರಿತವಾಗಿ ನಡೆಯಲಿದೆ. ಪಟ್ಟಿಯಲ್ಲಿನ ಶೇ 80 ಪದವೀಧರರು ಬಿಜೆಪಿಗೆ ಮತ ನೀಡಲಿದ್ದಾರೆ. ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ದೇಶದ ಭವಿಷ್ಯ ಅಡಗಿದೆ. ಕಾರ್ಯಕರ್ತರು ಗಮನ ಹರಿಸಬೇಕು’ ಎಂದರು.
ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ‘ಮತದಾರರ ಪಟ್ಟಿ ಪರಿಷ್ಕರಣೆ ಬಹಳ ಅವಶ್ಯವಿದೆ. 3 ತಿಂಗಳವರೆಗೆ ನಡೆಯಲಿರುವ ಈ ಪರಿಷ್ಕರಣೆ ಬಗ್ಗೆ ಕಾರ್ಯಕರ್ತರು ಹೆಚ್ಚು ಆಸಕ್ತಿ ಮತ್ತು ಜಾಗೃತಿ ವಹಿಸಬೇಕು. ಈ ಪಟ್ಟಿ ಎಲ್ಲ ಚುನಾವಣೆಗೂ ಅನ್ವಯಿಸಲಿದೆ’ ಎಂದರು.
ವಿಭಾಗ ಸಂಯೋಜಕ ಸಂತೋಷ ಹಡಪದ ಮಾತನಾಡಿದರು. ಈ ವೇಳೆ ಲಕ್ಕುಂಡಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ ಅರಹುಣಶಿ, ನಾಗನಗೌಡ ತಿಮ್ಮನಗೌಡ್ರ, ಸೋಮಶೇಖರ ಚರೇದ, ಲಿಂಗರಾಜ ಪಾಟೀಲ, ಗೌಸ ತಾಲೀಮನವರ, ಸಿದ್ದೇಶ ಹೂಗಾರ, ಬಿ.ಎಂ. ಮುಖಾಶಿ, ಬಾಪುಗೌಡ ತಿಮ್ಮನಗೌಡ್ರ, ಚಂದ್ರು ದಂಡಿನ, ವಸಂತ ಮೇಟಿ, ಅಜ್ಜಪ್ಪ ಹುಡೇದ, ಎಸ್.ಆರ್. ಪಾಟೀಲ, ಶಿವನಗೌಡ ಕರಿಗೌಡ್ರ, ಮಹೇಶ ಮುಸ್ಕಿನಬಾವಿ, ಕೇದಾರಗೌಡ ಮಣ್ಣೂರ ಇದ್ದರು.