ADVERTISEMENT

ಯೋಗ, ಜ್ಞಾನದಿಂದ ಮನಸ್ಸು ಪ್ರಪುಲ್: ಕೃಷ್ಣಗೌಡ ಪಾಟೀಲ

ಈಶ್ವರಿಯಿಂದ ಮಹಾಶಿವರಾತ್ರಿ ಮಹೋತ್ಸವ, ಶಾಂತಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:36 IST
Last Updated 19 ಫೆಬ್ರುವರಿ 2026, 5:36 IST
ಮುಳಗುಂದ ಈಶ್ವರಿ ವಿಶ್ವ ವಿದ್ಯಾಲಯದಿಂದ ನಡೆದ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು
ಮುಳಗುಂದ ಈಶ್ವರಿ ವಿಶ್ವ ವಿದ್ಯಾಲಯದಿಂದ ನಡೆದ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು   

ಮುಳಗುಂದ: ‘ನಿತ್ಯ ಶಿವದ್ಯಾನ ಸ್ಮರಣೆಯಿಂದ ಮನಸ್ಸು ಪ್ರಪುಲ್ ಆಗುತ್ತದೆ. ಯೋಗ, ಜ್ಞಾನದಿಂದ ಶಿವರಾತ್ರಿ ಆಚರಣೆ ಮಹತ್ವ ಪಡೆದುಕೊಂಡಿದೆ’ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ಶಿವಾನಿ ಅವರ ನೇತೃತ್ವದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಾಂತಿ ಯಾತ್ರೆ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಮಂಗಳವಾರ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಂತರ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ.ಭಾರತಿ ಜೀ ಮಾತನಾಡಿ, ಉಪವಾಸ ಎಂದರೆ ಆಧ್ಯಾತ್ಮಿಕ ಅರ್ಥದಲ್ಲಿ ಮನಸ್ಸು ಮತ್ತು ಬುದ್ದಿಯನ್ನ ಪರಮಾತ್ಮನ ಹತ್ತಿರ ಇರುವುದು ಎಂದರ್ಥವಾಗಿದೆ. ಶಿವರಾತ್ರಿ ಮನುಷ್ಯನಿಗೆ ಒಂದು ಮಹತ್ವದ ದಿನವಾಗಿದೆ. ಪ್ರತಿಯೊಬ್ಬರು ನಿರಾಕಾರ ಪರಮಾತ್ಮನ ನಾಮಸ್ಮರಣೆ, ಧ್ಯಾನ ಮಾಡಿ, ತಮ್ಮ ಜೀವನದಲ್ಲಿ ನಡೆದು ಹೋದ ಪಾಪ ಕರ್ಮಗಳಿಂದ ಮುಕ್ತಿಹೊಂದಿ. ಮಹಿಳೆಯರು ಆಧ್ಯಾತ್ಮಿಕ, ನೈತಿ, ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿದರು. ಮಕ್ಕಳು ಶಿವಭಕ್ತಿ ಹಾಡುಗಳಿಗೆ ನೃತ್ಯ ಮಾಡಿದರು. ಬಿ.ಎಂ.ಎಸ್ ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಸಿ.ಬಡ್ನಿ, ಮುಖಂಡರಾದ ಬಿ.ವಿ.ಸುಂಕಾಪುರ, ರಾಮಣ್ಣ ಕಮಾಜಿ, ಎನ್.ಆರ್.ದೇಶಪಾಂಡೆ, ಮಂಜುನಾಥ ಮಟ್ಟಿ, ದೇವರಾಜ ಸಂಗನಪೇಟಿ, ಗಂಗಪ್ಪ ಸುಂಕಾಪೂರ, ಮೋಹನ ಮದ್ದಿನ, ವೈದ್ಯ ಡಾ.ಎಸ್.ಸಿ.ಚವಡಿ, ಗೌರಮ್ಮ ಬಡ್ನಿ, ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಬಿ.ಕೆ.ವಂದನಾಜೀ, ಶಿವಾನಂದ ಇದ್ದರು. ಅಂಗನವಾಡಿ ಕಾರ್ಯಕರ್ತೆರಿಗೆ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.