
ಪ್ರಜಾವಾಣಿ ವಾರ್ತೆ
ಗದಗ: ‘ಯಾರು ಏನೇ ಅಂದರೂ ಹಣೆಬರಹದಲ್ಲಿ ಏನು ಬರೆದಿದೆಯೋ, ಅದೇ ಆಗುತ್ತದೆ. ನಾನೂ ಅದನ್ನು ನಂಬುತ್ತೇನೆ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
‘ಅಣ್ಣನ ಹಣೆಬಹರದಲ್ಲಿ ಇತ್ತೆಂದರೆ ಸಿ.ಎಂ ಆಗುತ್ತಾರೆ’ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ, ‘ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಹಣೆಬರಹದಲ್ಲಿ ಬರೆದಂತೆ ಆಗುತ್ತದೆ’ ಎಂದರು.
‘ಹಣೆಬರಹ ಬರೆಯುವುದು ದೇವರು. ನಾನು 5 ಬಾರಿ ಶಾಸಕ, 3 ಬಾರಿ ಮಂತ್ರಿ ಆಗುವೆ ಅಂತ ಕನಸಿನಲ್ಲೂ ಯೋಚಿಸಿರಲಿಲ್ಲ. ಹಣೆಬರಹದಲ್ಲಿ ಇದ್ದಿದ್ದರಿಂದ ಆಯ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.