ಅರಸೀಕೆರೆ: ಆಹಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಉದಾಸೀನತೆಯ ವಿರುದ್ಧ ತಾಲ್ಲೂಕು ಪಂಚಾಯಿತಿ ಸದಸ್ಯರು ಪಕ್ಷಬೇಧ ಮರೆತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆಯಿತು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಈ ಎರಡು ಇಲಾಖೆಗಳ ಅಧಿಕಾರಿಗಳು ಕಳೆದ ಸಭೆಯಲ್ಲಿ ಚರ್ಚಿಸಿದ ವೇಳೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಂಬಂಧಿ ಸಿದ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುತ್ತೇವೆ ಎಂದು ಹೇಳಿದ್ದು ಇಂದಿನ ಸಭೆಯಲ್ಲೂ ಅ ಬಗ್ಗೆ ಕೇಳಿದರೆ ಸಮ ರ್ಪಕ ಉತ್ತರ ನೀಡುತ್ತಿಲ್ಲ ಎಂದಾಗ ಶಾಸಕರು ಮಧ್ಯೆ ಪ್ರವೇಶಿಸಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾ ರಿಯಿಂದ ವರ್ತಿಸುವ ಇಂತಹ ಅಧಿಕಾರಿ ಗಳ ವಿರುದ್ಧ ಸೂಕ್ತ ಕ್ರಮಕೈ ಗೊಳ್ಳು ವಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿ ಗಳಿಗೆ ಸಭೆಯ ನಿರ್ಣಯ ಕಳಿಸಿಕೊಡು ವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾ ಧಿಕಾರಿ ಎಚ್.ಎಸ್.ಚಂದ್ರಶೇಖರ್ ಅವರಿಗೆ ಸೂಚಿಸಿದರು.
ಆಹಾರ ಇಲಾಖೆಯ ಶಿರಸ್ತೇದಾರ್ ಗಂಗಾಧರಯ್ಯ ತಮ್ಮ ಇಲಾಖೆ ಬಗ್ಗೆ ಮಾಹಿತಿ ನೀಡುತ್ತಿದ್ದ ವೇಳೆ ಸದಸ್ಯ ರವಿಶಂಕರ್ ಬಾಣಾವರ , ನ್ಯಾಯಬೆಲೆ ಅಂಗ ಡಿಯಲ್ಲಿ ಪಡಿತರದಾರರಿಗೆ ಸಮರ್ಪಕ ಆಹಾರಧಾನ್ಯ ವಿತರಿಸುತ್ತಿಲ್ಲ. ಅಲ್ಲದೆ ಅಂಗಡಿಯಲ್ಲಿ ಸೋಪು, ಎಣ್ಣೆ, ಉಪ್ಪು ಮುಂತಾದ ಸಾಮಾನುಗಳನ್ನು ಇಟ್ಟಿದ್ದು, ಇವುಗಳನ್ನು ಖರೀದಿಸಿದರೆ ಮಾತ್ರ ಪಡಿತರ ಧಾನ್ಯ ವಿತರಿಸುವುದಾಗಿ ಧಮಕಿ ಹಾಕುತ್ತಾರೆ ಎಂದು ಹೇಳಿದಾಗ ಬಿಜೆಪಿ ಸದಸ್ಯ ಬಿ.ಆರ್.ಜಯಣ್ಣ, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಜೆಡಿಎಸ್‌ನ ಲಕ್ಷ್ಮಣ್, ಶಿವಕುಮಾರ್ ಇದಕ್ಕೆ ದನಿಗೂಡಿಸಿದರು.
ಅಲ್ಲದೆ ಬಹಳಷ್ಟು ಅಂಗಡಿಗಳಲ್ಲಿ ಪಡಿತರದಾರರಿಗೆ ಸಮರ್ಪಕ ಪಡಿತರ ಆಹಾರಧಾನ್ಯ ನೀಡುವುದಿಲ್ಲ, ಇನ್ನು ಕೆಲವು ಅಂಗಡಿಗಳಲ್ಲಿ ಪಡಿತರ ಧಾನ್ಯ ತಂದ ಮೂರು ದಿನಗಳು ಮಾತ್ರ ವಿತರಿಸಿ ಕಡೆಗೆ ಬಂದವರಿಗೆ ಮುಗಿದು ಹೋಗಿದೆ ಮುಂದಿನ ಬಾರಿ ಬನ್ನಿ ಎಂದು ಹೇಳುತ್ತಾರೆ. ಇದರ ಬಗ್ಗೆ ಇಲಾಖೆ ಅಧಿಕಾರಿ ಗಳಿಗೆ ತಿಳಿಸಿದರೂ ಇದುವರೆವಿಗೂ ಯಾವುದೇ ಪ್ರಯೋ ಜನವಾಗಿಲ್ಲ. ಇದು ಸಾಲದು ಎಂಬಂತೆ ಅಡುಗೆ ಅನಿಲ ಸಿಲೆಂಡರ್ ಗ್ರಾಹಕರಿಗೆ ಸಿಗುತ್ತಿಲ್ಲ. ಆದರೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಈ ಬಗ್ಗೆ ತಾಲ್ಲೂಕು ಆಡಳಿತ ಮತ್ತು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲು ಅವರು ವಿಫಲರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಲಿಂಗೇಗೌಡ ಬಹಳ ವರ್ಷಗಳಿಂದ ಆಹಾರ ಇಲಾಖೆ ಅಧಿಕಾರಿಗಳು ಇಲ್ಲಿಯೇ ತಳವೂರಿದ್ದು,ನ್ಯಾಯಬೆಲೆ ಅಂಗಡಿ ಮಾಲೀಕರು ಇವರ ಮಾತು ಕೇಳುತ್ತಿಲ್ಲ, ಆದ್ದರಿಂದ ಇವರು ಇಲ್ಲಿಂದ ಬೇರೆಡೆಗೆ ಹೋಗುವುದು ಉತ್ತಮ ಎಂದು ಹೇಳಿದರಲ್ಲದೆ ಉದಾಸೀನತೆ ತೋರುವ ಅಧಿಕಾರಿ ವಿರುದ್ದ ಸಿಬ್ಬಂದಿ ಮತ್ತು ಆಡಳಿತರ ಸುಧಾರಣೆ ಇಲಾಖೆಗೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಬೇಕು ಎಂದು ಇಒ ಅವರಿಗೆ ನಿರ್ದೇಶನ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಲಕ್ಷ್ಮಣ, ರವಿಶಂಕರ್, ತಾಲ್ಲೂಕು ಆರೋಗ್ಯ ಇಲಾಖೆ ವ್ಯಾಪ್ತಿಗೊಳಪಡುವ 22 ಆರೋಗ್ಯ ಕೇಂದ್ರಗಳಲ್ಲಿ ರಕ್ಷಣ ಸಮಿತಿ ಇದ್ದು ಎಲ್ಲ ಸಮಿತಿಗಳಿಗೂ ಔಷಧಿ ಮತ್ತು ಇತರೆ ಸಾಮಗ್ರಿ ಕೊಳ್ಳಲು 1.75 ಲಕ್ಷ ರೂಪಾಯಿ ಸರ್ಕಾರ ಬಿಡುಗಡೆ ಮಾಡಿದೆ.
ಆದರೆ ಬಹಳಷ್ಟು ಸಮಿತಿಗಳು ಔಷಧಿ ಮತ್ತು ಇತರೆ ಸಾಮಗ್ರಿಗಳನ್ನು ಖರೀದಿ ಮಾಡಿದ್ದೇವೆ ಎಂದು ಹಣ ಬಿಡುಗಡೆ ಮಾಡಿವೆ ಯಾದರೂ ಆಸ್ಪತ್ರೆಗಳಲ್ಲಿ ಔಷಧಿ ಮತ್ತು ಸಾಮಗ್ರಿಗಳನ್ನು ಖರೀದಿ ಮಾಡದೇ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ವೆಚ್ಚ ಮಾಡಿರುವ ಬಗ್ಗೆ ದಾಖಲಾತಿ ಕೇಳಿದರೆ ದಾಖಲಾತಿ ಏಕೆ ಕೊಡುತ್ತಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಡಾ. ಶಂಕರಪ್ಪ ಸದಸ್ಯರು ಕೇಳಿದ ಪ್ರಶ್ನೆಗೆ ಮೌನಕ್ಕೆ ಶರಣಾದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಚಿಕ್ಕಮ್ಮ ಉಪಸ್ಥಿತ ರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.