ADVERTISEMENT

ಗ್ರಾಮ ಸ್ವಚ್ಛತೆಗೆ ಒತ್ತು ನೀಡಲು ಕರೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:10 IST
Last Updated 1 ಜೂನ್ 2011, 10:10 IST

ಜಾವಗಲ್: ಪಟ್ಟಣದ ಗ್ರಾಮದ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವಂತೆ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಂದ್ರೇಗೌಡ ಮಂಗಳವಾರ ತಿಳಿಸಿದರು.

ಗ್ರಾಮಪಂಚಾಯತಿಗೆ ಅನಿರೀ ಕ್ಷಿತ ಭೇಟಿ ನೀಡಿದ ಸಂಧರ್ಭದಲ್ಲಿ ಬಿಲ್ ಕಲೆಕ್ಟರ್ ನೇಮಕಾತಿ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಶೌಚಾಲಯ ಕಟ್ಟಿರುವ ಫಲಾನುಭವಿಗಳು ಹಣ ನೀಡದಿರುವ ಬಗ್ಗೆ ಜಿ.ಪಂ. ಅಧ್ಯಕ್ಷರ ಗಮನಕ್ಕೆ ತಂದರು.

ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಸರಿಯಾದ ವೇಳೆಗೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲವೆಂದು ಗ್ರಾಮ ಸ್ಥರು ದೂರಿದರು ಪಟ್ಟಣ ದಲ್ಲಿ ನಡೆಯುತ್ತಿರುವ ಗ್ರಾ.ಪಂ ಕಟ್ಟಡ ಪೂರ್ಣ ಗೊಂಡಿಲ್ಲದಿರುವ ಬಗ್ಗೆಯು ಅಧ್ಯಕ್ಷರ ಗಮನ ತರಲಾಯಿತು.

ನಂತರ ಜಿ.ಪಂ. ವತಿಯಿಂದ ಸ್ತ್ರೀ ಶಕ್ತಿ ಸಂಘಗಳ ಮಳಿಗೆಯ ಕಾರ್ಯವನ್ನು ಭೂ ಸೇನಾ ನಿಗಮದವರು ವಹಿಸಿಕೊಂಡಿದ್ದು ಇಲ್ಲಿಯವರೆಗೂ ಕಟ್ಟಡ ಪೂರ್ಣಗೊಂಡಿಲ್ಲದ ಬಗ್ಗೆ ಗ್ರಾಮಸ್ಥರು ಅಸಮದಾನ ವ್ಯಕ್ತಪಡಿಸಿದರು.   ಗ್ರಾ.ಪಂ. ಅಧ್ಯಕ್ಷ ಧನಂಜಯ, ಉಪಾಧ್ಯಕ್ಷೆ ನಳಿನಾಂಬಿಕಾ,  ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀನರಸಯ್ಯ, ತಾ.ಪಂ. ಇ.ಓ. ಚಂದ್ರಶೇಖರ್, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಕೃಷ್ಣಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.