ADVERTISEMENT

ಮಾರುಕಟ್ಟೆಗೆ ಭರಪೂರ ಕುಂಬಳಕಾಯಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:40 IST
Last Updated 22 ಅಕ್ಟೋಬರ್ 2012, 5:40 IST

ಹಳೇಬೀಡು: ಆಯುಧಪೂಜೆ ಪ್ರಯುಕ್ತ ಹಳೇಬೀಡು ಪಟ್ಟಣದಲ್ಲಿ ಮಾರಾಟ ಕ್ಕಾಗಿ ರಾಶಿಗಟ್ಟಲೆ ಕುಂಬಳಕಾಯಿ ಸೋಮವಾರ ಆಗಮಿಸಿದೆ. ಆದರೆ, ಬೆಲೆ ಕುಸಿತ ವ್ಯಾಪಾರಿಗಳಲ್ಲಿ ಹಬ್ಬಕ್ಕೂ ಮುನ್ನ ಆತಂಕ ಮೂಡಿಸಿದೆ.

ಪ್ರತಿ ವರ್ಷ ಪಟ್ಟಣಕ್ಕೆ ಒಂದು ವಾರ ಮುಂಚಿತವಾಗಿಯೆ ಕುಂಬಳಕಾಯಿ ಆಗಮಿಸುತ್ತವೆ. ಆರಂಭದಲ್ಲೇ ಬೆಲೆಯೂ ದುಬಾರಿಯಾಗುತ್ತದೆ. ಆದರೆ, ಈ ವರ್ಷ ಕುಂಬಳಕಾಯಿ ಬೆಲೆ ಬಾರಿ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವರ್ಷ ಗುಣಮಟ್ಟದ ಒಂದು ಕಾಯಿ ರೂ70, 80 ರವೆಗೂ ಮಾರಾಟವಾ ಗಿದ್ದ ಕುಂಬಳಕಾಯಿ ಈ ವರ್ಷ ರೂ.10ರಿಂದ 30ರ ವರೆಗೆ ಮಾರಾಟವಾಗುತ್ತಿವೆ.

ಆಯುಧಪೂಜೆಗೆ ಎರಡು ದಿನ ಬಾಕಿ ಇರುವುದರಿಂದ ಸೋಮವಾರ ಹಾಗೂ ಹಬ್ಬದ ದಿನ ಕುಂಬಳಕಾಯಿಗೆ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ವ್ಯಾಪಾರಿ ಗಳಲ್ಲಿದೆ. ಬರಗಾಲ ಆವರಿಸಿರುವು ದರಿಂದ ರೈತರ ಕೈಯಲ್ಲಿ ಹಣವೂ ಇಲ್ಲ. ವಹಿವಾಟು, ಸಾರಿಗೆ ವ್ಯವಹಾರ ಕುಸಿತ ಕಂಡಿದೆ. ಹೋಬಳಿಯಲ್ಲಿ ಬಹುತೇಕ ಗ್ರಾಮಗಳಲ್ಲಿ ಬರ ಆವರಿಸಿರುವುದರಿಂದ ಹಬ್ಬಕ್ಕೆ ಮಂಕು ಆವರಿಸಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.

`ದಸರಾ ಹಬ್ಬದಲ್ಲಿ ಜನ ಯಾವುದಕ್ಕೂ ಜಗ್ಗುವುದಿಲ್ಲ. ಮಾಲು ಹೆಚ್ಚಾಗಿ ಅವಕಗೊಂಡಿರುವುದರಿಂದ ಬೆಲೆ ಕಡಿಮೆಯಾಗಿದೆ. ಬಾರದ ಮಳೆರಾಯ ಬೆಳೆ ನಾಶವಾದ ನಂತರ ಶನಿವಾರ ದರ್ಶನ ನೀಡಿದ್ದರಿಂದ ಜನ ಹೊರಬಂದಿಲ್ಲ. ವಾತವರಣದ ಬದಲಾ ವಣೆಯಿಂದ ವ್ಯಾಪಾರ ಕುಸಿದಿರ ಬಹುದು~ ವ್ಯಾಪಾರಿಗಳ ಅನಿಸಿಕೆ.

`ಬರಗಾಲದ ಪರಿಸ್ಥಿತಿಯಲ್ಲಿ ಕಷ್ಟ ಪಟ್ಟು ಕುಂಬಳಕಾಯಿ ಬೆಳೆದಿದ್ದೇವೆ. ಬಾವಿಯಲ್ಲಿದ್ದ ಅಲ್ಪಸ್ವಲ್ಪ ನೀರು ಬೆಳೆಗೆ ಹರಿಸಿದ್ದೇವೆ. ದುಪ್ಪಟ್ಟು ಬೆಲೆಯ ರಸಗೊಬ್ಬರ ಹಾಕಿದ್ದೇವೆ. ಮಾರುಕಟ್ಟೆ ಯಲ್ಲಿ ಇಂದಿನ ದರ ನೋಡಿದರೆ ಯಾಕಾದರೂ ಕುಂಬಳಕಾಯಿ ಬೆಳೆ ದೆವೊ ಎನ್ನುವಂತಾಗಿದೆ~ ಎನ್ನುತ್ತಾರೆ ರೈತ ಸೊಪ್ಪಿನಹಳ್ಳಿ ಪಾಲಾಕ್ಷ.

`ಜನರ ಬಳಿ ಹಣ ಇಲ್ಲದೆ ಓಡಾಟ ಕಡಿಮೆಯಾಗಿದೆ. ಆಟೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಆಯುಧಪೂಜೆ ಮಾಡುವ ಆಸಕ್ತಿ ಇಲ್ಲದಂತಾಗಿದೆ. ಕಡಿಮೆ ಬೆಲೆಗೆ ಕುಂಬಳಕಾಯಿ ದೊರೆತರೆ ಮಾತ್ರ ಖರೀದಿ ಮಾಡುತ್ತೇವೆ~ ಎಂಬುದು ಆಟೋಚಾಲಕ ತಟ್ಟೆಹಳ್ಳಿ ವೆಂಕಟೇಶ್ ಅವ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.