ADVERTISEMENT

ರಾಮದೇವ್ ಉಪವಾಸಕ್ಕೆ 10 ಮಂದಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:10 IST
Last Updated 3 ಜೂನ್ 2011, 6:10 IST

ಕುಶಾಲನಗರ: ದೇಶವಿಡೀ ವ್ಯಾಪಿಸಿ ರುವ ಭ್ರಷ್ಟಾಚಾರ ತಡೆಗಟ್ಟುವುದು ಸೇರಿದಂತೆ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ರೂ. 400 ಲಕ್ಷ ಕೋಟಿ ಕಪ್ಪುಹಣವನ್ನು ವಾಪಾಸ್ಸು ಭಾರತಕ್ಕೆ ತಂದು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸ ಬೇಕು ಎಂದು ಒತ್ತಾಯಿಸಿ ಜೂ.4 ರಂದು ಭಾರತ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ಯೋಗಗುರು ರಾಮ್‌ದೇವ್ ನೇತೃತ್ವದಲ್ಲಿ ನಡೆಯಲಿ ರುವ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾ ಗ್ರಹದಲ್ಲಿ ಪಾಲ್ಗೊಳ್ಳಲು ಕೊಡಗಿನಿಂದ 10 ಮಂದಿ ಕಾರ್ಯ ಕರ್ತರು ಜೂ.3 ರಂದು ದೆಹಲಿಗೆ ತೆರಳಲಿದ್ದಾರೆ.

ಆಂದೋಲನದಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆಗಳನ್ನು ಸರ್ಕಾರವು ಒಪ್ಪಿ ಕೊಳ್ಳುವ ತನಕ ಹೋರಾಟ ನಡೆಸ ಲಾಗುವುದು ಎಂದು ದೆಹಲಿಗೆ ತೆರಳ ಲಿರುವ ಟ್ರಸ್ಟ್‌ನ ಸಂಯೋಜಕ ಬಿ. ಅಮೃತ್‌ರಾಜ್ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ದೆಹಲಿಯಲ್ಲಿ ನಡೆಯಲಿರುವ ಉಪ ವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಜೂ.4 ರಂದು ಕುಶಾಲನಗರ ಪಟ್ಟ ಣದ ಕಾರು ನಿಲ್ದಾಣದಲ್ಲಿ ಸ್ವಾಭಿ ಮಾನ್ ಟ್ರಸ್ಟ್‌ನ ಸ್ವಯಂಸೇವಕರು  ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯಕರ್ತ ಜಿ.ಎಲ್.ನಾಗರಾಜ್ ತಿಳಿಸಿದರು.

ಭ್ರಷ್ಟಾಚಾರ ವಿರೋಧಿ ವ್ಯವಸ್ಥೆ ಯಲ್ಲಿ ಆಸಕ್ತಿಯುಳ್ಳವರು  ಭಾಗವಹಿಸಿ ಎಂದು ಮನವಿ ಮಾಡಿದರು. ಸತ್ಯಾ ಗ್ರಹಕ್ಕೆ ತೆರಳಲಿರುವ ಕಾರ್ಯಕರ್ತ ರಾದ ಟಿ.ಆರ್.ಶರವಣಕುಮಾರ್, ಎಂ.ಕೆ. ದಿನೇಶ್, ವಿ.ಆರ್.ಶಿವಶಂಕರ್, ಕೆ.ಪಿ. ಚಂದ್ರ ಶೇಖರ್,ಕೆ.ಎನ್.ಸುರೇಶ್, ವಿ.ವೈಶಾಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.