ADVERTISEMENT

ಹಬ್ಬಗಳು ಸಂಬಂಧ ಬೆಸೆಯುವ ಕೊಂಡಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2016, 8:28 IST
Last Updated 12 ಏಪ್ರಿಲ್ 2016, 8:28 IST

ಬಾಣಾವರ: ಹಬ್ಬಗಳು ಸಾಂಸ್ಕೃತಿಕತೆಯ ಪ್ರತೀಕವಾಗಿದ್ದು ಕುಂಟುಂಬಗಳನ್ನು ಒಂದಾಗಿ ಬೆಸೆಯುವ ಮಾರ್ಗಗಳಾಗಿವೆ. ಹೀಗಾಗಿ, ಹಬ್ಬಗಳು ಅಧುನಿಕ ಯುಗ ದಲ್ಲಿ ಅನಿವಾರ್ಯವಾಗಿವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ಪಟ್ಟಣದ ಕೋಟೆ ಬಡಾವಣೆಯಲ್ಲಿ ಭಾನುವಾರ ನಡೆದ ಚಂದ್ರಮಾನ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೌಲ್ಯ ಮತ್ತು ನೈತಿಕತೆಯಿಂದ ಮನುಷ್ಯ ದೌರ್ಬಲ್ಯ ಮೀರಿ ಮಾನವತಾ ವಾದಿಯಾಗಿ ಬದುಕಬಹುದು. ವೈಚಾರಿಕ ಮನೋಭಾವ, ಧರ್ಮಶ್ರೇಷ್ಠತೆ, ಸಾರ– ತತ್ವಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಲು ಹಬ್ಬಗಳು ರಹದಾರಿ ಯಾಗಿವೆ. ನಾವು ಧರ್ಮ ಹಾಗೂ ದೇವ ರನ್ನು ಮರೆತು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ.

ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಶ್ರೇಷ್ಠವಾದುದು. ವಿದೇಶಿಯರು ಈ ಮಣ್ಣಿನ ಆಚಾರ– ವಿಚಾರಗಳಿಗೆ ಆಕರ್ಷಿತರಾಗಿ ತಮ್ಮ ಬದು ಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಶಾಶ್ವತವಾಗಿ ಶಾಂತಿ– ನೆಮ್ಮದಿ ಕಾಣಲು ಹವಣಿಸುತ್ತಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ದುಶ್ಚಟಗಳಿಗೆ ಬಲಿಯಾ ಗುತ್ತಿದ್ದಾರೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಸ್. ಅಶೋಕ್ ಮಾತನಾಡಿ, ಸತ್ಸಂಗ ಹಾಗೂ ಭಗವಂತನ ಸ್ಮರಣೆ ಮನುಷ್ಯರಲ್ಲಿ ಸಾತ್ವಿಕ ಮನೋಭಾವ ಬೆಳಸುತ್ತವೆ ಎಂದರು.
ತಾಲ್ಲೂಕು ಪಂಚಾಯತಿ ಸದಸ್ಯೆ ಲಕ್ಷ್ಮೀ ಶ್ರೀಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ. ಶ್ರೀನಿವಾಸ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಸಿ. ಮಂಜು ನಾಥ್, ಮಮತಾ ಜಯರಾಂ, ಶ್ರೀನಿ ವಾಸ್, ಚಂದ್ರಮಾನ ಯುಗಾದಿ ಆಚ ರಣಾ ಸಮಿತಿಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.