ADVERTISEMENT

10 ದಿನಗಳಲ್ಲಿ ವರದಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 7:04 IST
Last Updated 4 ಡಿಸೆಂಬರ್ 2012, 7:04 IST

ಅರಕಲಗೂಡು:  ಪಟ್ಟಣದಲ್ಲಿ ವಿವಾದಕ್ಕೆ ಒಳಗಾಗಿರುವ ಜಮೀನನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಸೋಮವಾರ ಪರಿಶೀಲಿಸಿದರು.
ಜಮೀನಿನ ಸ್ಥಳ ತನಿಖೆ ಕಾರ್ಯ ಪಟ್ಟಣದ ಜನತೆಯಲ್ಲಿ ತೀವ್ರ ಕುತೂಹ ಲಕ್ಕೆ ಕಾರಣವಾಗಿದ್ದು ಅಪಾರ ಸಂಖ್ಯೆ ಯಲ್ಲಿ ಜನ ಜಮಾಯಿಸಿದ್ದರು.

ಪಟ್ಟಣದ ಹೊಳೆನರಸೀಪುರ ರಸ್ತೆ ಯಲ್ಲಿ 4.10 ಎಕರೆ ಜಮೀನು ಕಳೆದ ನಾಲ್ಕು ದಶಕಗಳಿಂದ ವಿವಾದದ ಕೇಂದ್ರ ವಾಗಿದೆ. ಒಂದು ಕೋಮಿನ ಜನತೆ ಇದು ತಮ್ಮ ಧಾರ್ಮಿಕ ಕೇಂದ್ರಕ್ಕೆ ಸೇರಿದ್ದು ಎಂದು ವಾದ ಮಂಡಿಸಿದೆ. ನಾಗರಿಕರ ಇನ್ನೊಂದು ಗುಂಪು, ಈ ಪ್ರದೇಶ ಸರ್ಕಾರಿ ಕೆರೆಯಾಗಿದ್ದು 1920ರಿಂದ ದಾಖಲೆಗಳಲ್ಲಿ ನಮೂದಾಗಿದೆ. ಮಧ್ಯಂತರದಲ್ಲಿ ಇದನ್ನು ತಿದ್ದುಪಡಿ ಮಾಡಿ ಒಂದು ಕೋಮಿಗೆ ನೀಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಇದನ್ನು ಸಾರ್ವಜನಿಕ ಕಾರ್ಯಕ್ಕೆ ಮೀಸಲಿಡುವಂತೆ ಒತ್ತಾಯಿಸಿತ್ತು.

ಎರಡೂ ಕಡೆಗಳಿಂದ ಬಂದ ದೂರಿನ ಬಗ್ಗೆ ಪ್ರಸಕ್ತ ವರ್ಷದಲ್ಲೇ 5 ಸಭೆಗಳು ನಡೆದು ಪ್ರಕರಣದ ಕುರಿತು ದೀರ್ಘ ವಿಚಾರಣೆ ನಡೆಸಿ ಆದೇಶ ತಡೆ ಹಿಡಿಯ ಲಾಗಿತ್ತು. ಪ್ರಕರಣದ ಕುರಿತು ಆದೇಶ ಹೊರಡಿಸದೇ ಇರುವ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯ ದರ್ಶಿಗಳು ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾ ರಿಗಳು ಸ್ಥಳ ಪರಿಶೀಲನೆ ಕಾರ್ಯ ಕೈಗೊಂಡಿದ್ದರು.

ವಿವಾದಿತ ಜಮೀನನ್ನು ಪರಿಶೀಲಿಸಿದ ನಂತರ ತಾಲ್ಲೂಕು ಕಚೇರಿಯಲ್ಲಿ ಎರಡು ಗುಂಪುಗಳ ಮುಖಂಡರ ಹೇಳಿಕೆಗಳನ್ನು ಜಿಲ್ಲಾಧಿಕಾರಿಗಳು ಪಡೆದುಕೊಂಡರ ಲ್ಲದೇ ಪ್ರಕರಣದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್‌ರಾಜ್ ಕಳೆದ ನಾಲ್ಕು ದಶಕಗಳಿಂದ ವಿವಾದಕ್ಕೆ ಒಳಗಾ ಗಿದ್ದ ಈ ಪ್ರಕರಣದ ಕುರಿತು ವಿಚಾರಣೆ ಮುಗಿದಿದೆ. ಹತ್ತು ದಿನಗಳಲ್ಲಿ ಸರ್ಕಾ ರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಬಾಸಿತ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮದ್ ಖಾಸಿಂ, ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ,  ಪಟ್ಟಣ ಪಂಚಾಯತಿ ಸದಸ್ಯರಾದ ಎ.ಪಿ. ೀಶ್,  ಕಾರೋನೇಷನ್ ಸಹಕಾರ ಸಂಘದ ಅಧ್ಯಕ್ಷ ಎ.ಎನ್. ಗಣೇಶ್‌ಮೂರ್ತಿ, ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.