ADVERTISEMENT

12 ಅಡಿ ಕಾಳಿಂಗ ಸರ್ಪ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 3:37 IST
Last Updated 19 ಜುಲೈ 2021, 3:37 IST
ಹೆತ್ತೂರು ಹೋಬಳಿಯ ಬ್ಯಾಗಡಹಳ್ಳಿ ಗ್ರಾಮದಲ್ಲಿ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿತಣ್ಯಕ್ಕೆ ಬಿಡಲಾಯಿತು
ಹೆತ್ತೂರು ಹೋಬಳಿಯ ಬ್ಯಾಗಡಹಳ್ಳಿ ಗ್ರಾಮದಲ್ಲಿ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿತಣ್ಯಕ್ಕೆ ಬಿಡಲಾಯಿತು   

ಹೆತ್ತೂರು: ಹೋಬಳಿಯ ಬ್ಯಾಗಡಹಳ್ಳಿ ಗ್ರಾಮದಲ್ಲಿ 12 ಅಡಿ ಉದ್ದದ ಭಾರಿ ಕಾಳಿಂಗ ಸರ್ಪವನ್ನು ಭಾನುವಾರ ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಪಶ್ಚಿಮಘಟ್ಟ ತಪ್ಪಲಿನ ಗ್ರಾಮದ ರೈತ ಆಕಾಶ ಅವರ ಕಾಫಿ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸೋಮವಾರಪೇಟೆ ಉರಗ ಪ್ರೇಮಿ ಸ್ನೇಕ್‌ ರಘು, ಜಾನಿ ಸುಮಾರು 3 ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿ ಸುಮಾರು 12 ಅಡ್ಡಿ ಉದ್ದ ಹಾಗೂ 9 ಕೆಜಿ ತೂಕವಿದ್ದ ಕಾಳಿಂಗ ಸರ್ಪವನ್ನು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ನವೀನ್‌ಕುಮಾರ್, ಸಿಬ್ಬಂದಿ ಆಕಾಶ, ಜೀವನ್, ಅಖಿಲ್, ಅಭಿಷೇಕ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.